ಬಾಲಿವುಡ್ ಅಂದ್ರೆ ಒಂದು ರೀತಿಯ ಬಣ್ಣಗಳಿಂದ ತುಂಬಿದ ಜಗತ್ತು. ಅಲ್ಲಿಯ ನಟಿಮಣಿಯರೂ ಸಹ ಆಗಾಗ್ಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತ ಪಡ್ಡೆ ಹುಡುಗರ ನಿದ್ದೆಗೆ ಕನ್ನ ಹಾಕ್ತಾರೆ. ನಟಿ ಕಿಯಾರಾ ಅದ್ವಾನಿ ಸಹ ಕೆಲ ದಿನಗಳ ಹಿಂದೆ ಬಿಕನಿ ತೊಟ್ಟು ಫೋಟೋ ಶೇರ್ ಮಾಡಿಕೊಂಡ್ರೆ, ಆ ಪಟ ನೋಡಿ ಗಂಡೈಕ್ಳು ಗಢ ಗಢ ನಡುಗಿದ್ದುಂಟು.

ಕಿಯಾರಾ ಮೂಲ ಹೆಸರು ಆಲಿಯಾ. ಆದ್ರೆ ಬಣ್ಣದ ಜಗತ್ತಿಗೆ ಕಿಯಾರಾ ಎಂದು ಪರಿಚಿತ. 1998 ರಲ್ಲಿ ಜನಿಸಿದ ಕಿಯಾರಾ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಎಂ.ಎಸ್.ಧೋನಿ ಸಿನಿಮಾದಲ್ಲಿ ಸಾಕ್ಷಿ ಸಿಂಗ್ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದರು.

ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಗೊಂಡ ಲಸ್ಟ್ ಸ್ಟೋರಿ, ತೆಲುಗು ಚಿತ್ರ ಭರತ ಅನೆ ನೇನು, ಶಾಹಿದ್ ಕಪೂರ್ ಜೊತೆಗಿನ ಕಬೀರ್ ಸಿನಿಮಾದಲ್ಲಿ ಕಿಯಾರಾ ನಟಿಸಿದ್ದಾರೆ.

2014ರಲ್ಲಿ ಫಗ್ಲಿ ಸಿನಿಮಾ ವೇಳೆ ಸಲ್ಮಾನ್ ಖಾನ್ ಸಲಹೆಯಂತೆ ಕಿಯಾರಾ ತಮ್ಮ ಹೆಸ್ರು ಬದಲಿಸಿಕೊಂಡಿದ್ದರು ಎನ್ನಲಾಗಿದೆ. ಈಗಾಗಲೇ ಆಲಿಯಾ ಭಟ್ ಇರೋದರಿಂದ ನಿಮ್ಮ ಹೆಸರು ಬದಲಿಸಿಕೊಳ್ಳೋದೂ ಸೂಕ್ತ ಎಂದು ಸಲಹೆ ನೀಡಿದ್ದರಂತೆ.

ಲಸ್ಟ್ ಸ್ಟೋರಿಸ್ ನಲ್ಲಿ ವಿಕ್ಕಿ ಕೌಶಲ್ ಪತ್ನಿಯಾಗಿ ನಟಿಸಿದ್ದರು. ಚಿತ್ರದ ಕೆಲ ದೃಶ್ಯಗಳು ಬಹು ಚರ್ಚೆಗೆ ಗ್ರಾಸವಾಗಿದ್ದವು. ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ತುಣುಕುಗಳು ಹರಿದಾಡುತ್ತಿವೆ.

ಶೇರ್ ಶಾ, ಜುಗ್ ಜುಗ್ ಜಿಯೊ ಸೇರಿದಂತೆ ಇನ್ನು ಹೆಸರಿಡದ ಮೂರು ಚಿತ್ರಗಳು ಸದ್ಯ ಕಿಯಾರಾ ಕೈಯಲ್ಲಿವೆ.