ಉಡುಪಿ: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ 50 ಕೋಟಿ ರೂ. ಬೆಲೆಬಾಳುವ ಅದ್ಧೂರಿ ಮನೆ ಕಟ್ಟುತ್ತೀದ್ದಾರಾ ಅನ್ನೋ ಪ್ರಶ್ನೆಗೆ ಉಡುಪಿ ಶಾಸಕ ರಘುಪತಿ ಭಟ್ ಉತ್ತರ ನೀಡಿದ್ದಾರೆ.
ಶಾಸಕ, ಮಂತ್ರಿಯಾದವರು ಮನೆ ಕಟ್ಟುವುದು ಅಪರಾಧವಲ್ಲ. ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಿದರೆ ಅದು ಅಪರಾಧ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ನೋಡಿದ್ರೆ ಅದು ಅಂದಾಜು 50 ರಿಂದ 60 ಲಕ್ಷ ರೂ. ಮೌಲ್ಯದ ಮನೆ ಎಂದು ಗೊತ್ತಾಗುತ್ತದೆ. ಕೋಟ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ದೊಡ್ಡ ಬಂಗಲೆಯನ್ನೇನು ಕಟ್ಟಿಸುತ್ತಿಲ್ಲ ಎಂದು ರಘುಪತಿ ಭಟ್ ಹೇಳಿದ್ದಾರೆ.
ರಾಜಕಾರಣದಲ್ಲಿ ಈ ರೀತಿಯ ಅಪಪ್ರಚಾರ ಸಾಮಾನ್ಯ, ಹಾಗಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಯಾವುದಕ್ಕೂ ತಲೆ ಕಡೆಸಿಕೊಳ್ಳಬಾರದು ಎಂದು ಭಟ್ ಸಲಹೆ ನೀಡಿದರು. ಕಳೆದ ಕೆಲ ದಿನಗಳಿಂದ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವರಾದ ಮೇಲೆಯೇ ಮನೆಯ ಕಟ್ಟೋಕೆ ಮುಂದಾಗಿದ್ದಾರೆ ಅನ್ನೋ ಸುದ್ದಿಗಳು ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿವೆ.