ದೇಶದಲ್ಲಿ ಎರಡನೇ ಅಲೆ ಕಡಿಮೆಯಾಗುತ್ತಿದೆ. ಆದರೆ ಪಕ್ಕದ ರಾಜ್ಯದಲ್ಲಿ ಎರುತ್ತಿರುವ ಕೊರೊನಾ ಪ್ರಕರಣ ಸಂಖ್ಯೆ ತಲ್ಲಣ ಮೂಡಿಸುತ್ತಿದೆ. ಮೊದಲನೇ ಹಾಗೂ ಎರಡನೇ ಅಲೆ ಕೇರಳದಲ್ಲಿಯೇ ಮೊದಲು ಕಾಣಿಸಿಕೊಂಡಿತ್ತು. ಇದೀಗ ಅಲೆ ಕೇರಳದಲ್ಲಿ ಅಬ್ಬರಿಸಲು ಪ್ರಾರಂಭಿಸಿತೇ ಎಂಬುದು ಆತಂಕಕಾರಿಯಾಗಿದೆ. ಏಕೆಂದರೆ, ಕೇರಳದಲ್ಲಿ ಸತತ ಮೂರನೇ ದಿನವೂ 2೨,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ಈ ಪ್ರಶ್ನೆ ಉದ್ಭವಿಸಿದೆ.

ದೇಶದಾದ್ಯಂತ 44,230 ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣ ಕೇರಳದಲ್ಲಿ ದಾಖಲಾಗಿವೆ. ಶುಕ್ರವಾರ ಬೆಳಿಗ್ಗೆ ಬಂದಿರುವ ವರದಿಯ ಪ್ರಕಾರ, ದೇಶದಲ್ಲಿ 24 ಗಂಟೆಗಳಲ್ಲಿ 42,360 ಜನರು ಕರೋನಾದಿಂದ ಚೇತರಿಸಿಕೊಂಡಿದ್ದರೆ, 44,230 ಜನರು ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ 4,05,155 ಕ್ಕೆ ಏರಿದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ, ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳು 1.28 ಪ್ರತಿಶತವಾಗಿದೆ.
ಕೇರಳದ ಕೊರೊನಾ ಅಂಕಿಅಂಶಗಳ ಪ್ರಕಾರ, ಸತತ ಮೂರು ದಿನಗಳವರೆಗೆ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಕಾರಣದಿಂದಾಗಿ, ದೇಶಾದ್ಯಂತ ಹೊಸ ಪ್ರಕರಣಗಳಲ್ಲಿ ದೊಡ್ಡ ಏರಿಕೆ ಕಾಣುತ್ತಿದೆ. ಪ್ರತಿದಿನ ಕರೋನಾದ ಹೊಸ ಪ್ರಕರಣಗಳ ಸಂಖ್ಯೆ 30 ರಿಂದ 40 ಸಾವಿರಗಳಷ್ಟಿತ್ತು, ಆದರೆ ಕೇರಳದಲ್ಲಿ ಪ್ರಕರಣಗಳ ಏರಿಕೆ ಬೆನ್ನಲ್ಲೆ ದೇಶದಲ್ಲಿ ಪ್ರತಿದಿನ 40 ಸಾವಿರವನ್ನು ದಾಟಿದೆ. ಏತನ್ಮಧ್ಯೆ, ಶನಿವಾರ ಮತ್ತು ಭಾನುವಾರ ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಇದಷ್ಟೇ ಅಲ್ಲ, ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ.
Kerala reports 20,772 new #COVID19 cases, 14,651 recoveries and 116 deaths in the last 24 hours. Positivity rate is at 13.61%.
— ANI (@ANI) July 30, 2021
Active cases: 1,60,824
Total recoveries: 31,92,104
Death toll: 16,701
ಕರ್ನಾಟಕದ ಮೇಲೆ ಕೊರೊನಾ ಕರಿಮೋಡ
ಕೇರಳದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಏರಿಕೆ ಪರಿಣಾಮ ಕರ್ನಾಟಕದಲ್ಲಿ ಆತಂಕ ಮನೆ ಮಾಡಿದೆ. ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಕಡಿಮೆಯಾಗಿದೆ. ರಾಜ್ಯದಲ್ಲಿ ಇಂದು 1890 ಕೊರೊನಾ ಪ್ರಕರಣ ದಾಖಲಾಗಿವೆ. ಆದರೆ, ಪಕ್ಕದ ರಾಜ್ಯದಲ್ಲಿ ಕೊರೊನಾ ತೀವ್ರವಾಗಿರುವ ಸರ್ಕಾರ ಶೀಘ್ರದಲ್ಲಿಯೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಬರೀ ರಾಜಕೀಯ ಹೈಡ್ರಾಮವೇ ನಡೆಯುತ್ತಿದೆ. ಸಿಎಂ ಬದಲಾವಣೆಯ ನಂತರ ಸಂಪುಟ ಸರ್ಕಸ್ ನಡೆಯುತ್ತಿದೆ. ಇತ್ತ, ರಾಜ್ಯದಲ್ಲಿ ಪ್ರವಾಹ ಜನಜೀವನ ಅಸ್ತವ್ಯಸ್ಥಗೊಳಿಸಿದೆ. ಈ ಮಧ್ಯೆ ಕೊರೊನಾ ಸದ್ದಿಲ್ಲದೆ ಹಡರಡಲು ಪ್ರಾರಂಭಿಸಿದರೆ ಕರ್ನಾಟಕಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕೇಂದ್ರದ ನಿಯಮಗಳ ಪ್ರಕಾರ ಗಡಿ ಬಂದ್ ಮಾಡುವ ಹಾಗಿಲ್ಲ. ಆದ್ರೆ, ಇತರೆ ಕಟ್ಟು ನಿಟ್ಟಿನ ತಪಾಸಣೆ ಕ್ರಮವನ್ನು ಚುರುಕುಗೊಳಿಸಿ ಕರ್ನಾಟಕದ ಜನರನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ.
Karnataka reports 1890 new #COVID19 cases, 1631 recoveries and 34 deaths in the last 24 hours.
— ANI (@ANI) July 30, 2021
Active cases: 23,478
Total recoveries: 28,43,110
Death toll: 36,525 pic.twitter.com/bx5IINUrfI