ಬೆಂಗಳೂರು : ಜೆಡಿಎಸ್ ಬಲಿಷ್ಠವಾಗಿರುವ ಕಾರಣ ಕರ್ನಾಟಕದ ರಾಜಕಾರಣ ಸಾಕಷ್ಟು ಆಸಕ್ತಿದಾಯಕವಾಗಿರುತ್ತದೆ ಎಂದು ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪುತ್ರಿ ವಿಜೇತ ಅನಂತಕುಮಾರ್ ಟ್ವಿಟ್ ಮಾಡಿದ್ದಾರೆ.
Why Karnataka politics is really interesting?
— Vijeta AnanthKumar (@vijeta_at) July 29, 2021
JDS is still a very strong political force
ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲೆ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪುತ್ರಿ ಮಾಡಿರುವ ಟ್ವಿಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಿಜೇತ ತಮ್ಮ ಟ್ವಿಟ್‌ನಲ್ಲಿ ಜೆಡಿಎಸ್ ಸಾಮರ್ಥ್ಯವನ್ನು ಕೊಂಡಾಡಿದ್ದು ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿ ಉಳಿದಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಈ ಟ್ವಿಟ್ ಕಂಡ ಜೆಡಿಎಸ್ ಕಾರ್ಯಕರ್ತರು ಖುಷಿಯಾಗಿದ್ದು ತಾಯಿಯೊಂದಿಗೆ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ.
If JDS comes out from same family politics, and some big names joins to the party like your mom @Tej_AnanthKumar and if she is candidature for CM position. Then there is a chance
— Manava (@MandyadaGundu) July 29, 2021
ವಿಜೇತ ಟ್ವಿಟ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಪ್ರಮುಖ ನಾಯಕರಾಗಿದ್ದ ಅನಂತ್ ಕುಮಾರ್ ಪುತ್ರಿ ನನ್ಮ ಸಹೋದರಿ ಸಮಾನರು, ಅವರು ಜೆಡಿಎಸ್ ಪಕ್ಷದ ಬಗೆಗಿನ ಅವರ ಅಭಿಪ್ರಾಯಕ್ಕೆ ಧನ್ಯವಾದಗಳು, ಅವರ ಅಭಿಪ್ರಾಯ ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದರು.
ನಿಮಗೆ ನಮ್ಮ ಪಕ್ಷಕ್ಕೆ ಆದರದ ಸ್ವಾಗತ ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಅವಶ್ಯಕತೆ ಬಹಳ ಇದೆ ನೀವು ಮತ್ತು ನಿಮ್ಮ ತಾಯಿಯವರು ಪಕ್ಷಕ್ಕೆ ಬನ್ನಿ ನಿಮಗೆ ಸೂಕ್ತ ಸ್ಥಾನಮಾನ ಕೊಡುತ್ತಾರೆ ನಿಮ್ಮ ಹಿಂದೆ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಿದ್ದಾರೆ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ 🇳🇬 ಭದ್ರಾವತಿ ನಿವಾಸ ಗೌಡ
— ಭದ್ರಾವತಿ ನಿವಾಸ ಗೌಡ (@Nivasgowdru3) July 29, 2021
ಅಲ್ಲದೇ ಅವರ ತಾಯಿ ಬರುವುದಾದರೆ ಪಕ್ಷಕ್ಕೆ ಸಂತೋಷದಿಂದ ಆಹ್ವಾನ ಮಾಡುತ್ತೇನೆ. ಬಿಜೆಪಿ ಅಂತ ಅವರನ್ನ ಗುರುತಿಸಿಲ್ಲ ನಮ್ಮ ಪಕ್ಷಕ್ಕೆ ಬರುವುದಾದರೆ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ. ಮುಂದಿನ ರಾಜಕಾರಣದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗಲಿದೆ. ಅಲ್ಲಿಯವರೆಗೂ ನಾವು ತಾಳ್ಮೆ ಇಂದ ಕಾಯಬೇಕು ಎನ್ನುವ ಮೂಲಕ ಕುಮಾರಸ್ವಾಮಿ ಕುತೂಹಲ ಹೆಚ್ಚಿಸಿದ್ದಾರೆ.

ಮಾಜಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್‌ಗೆ ಲೋಕಸಭೆ ಚುನಾವಣೆಗೆ ಟಿಕೇಟ್ ನೀಡಿರಲಿಲ್ಲ, ಸಂಘ ಮತ್ತು ಪಕ್ಷದ ಜೊತೆಗೆ ನಿರಂತರವಾಗಿ ಗುರುತಿಸಿಕೊಂಡರೂ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ. ಅಲ್ಲದೇ ಈ ನಡುವೆ ಪಕ್ಷದಲ್ಲಿ ತಾತ್ಸರಕ್ಕೆ ಒಳಗಾದ ಹಿನ್ನಲೆಯಲ್ಲಿ ಪುತ್ರಿ ವಿಜೇತ ಆಕ್ರೋಶಗೊಂಡಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.