ಬೆಂಗಳೂರು : ರಾಜ್ಯದಲ್ಲಿ ಸೊನ್ನೆಯಿಂದ ನೂರರ ಗಡಿ ದಾಟಿಸಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸಲ್ಲಬೇಕು. ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಆ ಸ್ಥಾನ ತುಂಬುವ ವ್ಯಕ್ತಿ ಯಾರು? ಆ ವರ್ಚಸ್ಸು ಮತ್ತು ಸಾಮರ್ಥ್ಯಯಾರಿಗಿದೆ ಎಂಬುದರ ಬಗ್ಗೆ ರಾಜ್ಯದ ಜನರಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಮುಂದಿನ ಸಿಎಂ ಯಾರು ಎಂಬ ಚರ್ಚೆ ಮುನ್ನಲೆಗೆ ಬಂದಾಗ ಸಿಎಂ ರೇಸ್‌ನಲ್ಲಿ ಘಟಾನುಘಟಿ ನಾಯಕರುಗಳ ಹೆಸರು ಕೇಳಿಬಂದಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಶಿವಕುಮಾರ್ ಉದಾಸಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕ ಅರವಿಂದ ಬೆಲ್ಲದ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೆಸರು ಅಗ್ರಪಂಥಿಯಲ್ಲಿದ್ದವು. ಆದರೆ ಇವರಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದು ಸಾಕಷ್ಟು ಕುತೂಹಲದ ಸಂಗತಿಯಾಗಿತ್ತು.
ಯಡಿಯೂರಪ್ಪ ಬಳಿಕ ಮುಖ್ಯಮಂತ್ರಿ ಪಟ್ಟಕಟ್ಟುವುದು ಹೈಕಮಾಂಡ್ ಸುಲಭದ ಕೆಲಸ ಏನೂ ಆಗಿರಲಿಲ್ಲ. ರಾಜ್ಯ ಬಿಜೆಪಿ ನಾಯಕರನ್ನು ನಿಭಾಯಿಸುವುದು, ಒಟ್ಟಾಗಿ ಕೊಂಡಯ್ಯೊವುದು ಜೊತೆಗೆ ಚುನಾವಣೆ ದೃಷ್ಟಿಯಿಂದ ಉತ್ತಮ ಆಡಳಿತ ನೀಡುವ ವ್ಯಕ್ತಿಯನ್ನು ವರಿಷ್ಠರು ಆಯ್ಕೆ ಮಾಡಬೇಕಿತ್ತು. ಇದರ ಜೊತಗೆ ಮುಂದಿನ ಸಿಎಂ ಲಿಂಗಾಯತರನ್ನು ಮಾಡಬೇಕೊ ಅಥಾವ ಲಿಂಗಾಯತೇರ ಸಮುದಾಯವನ್ನು ಮಾಡಬೇಕೊ ಅನ್ನೊ ಗೊಂದಲ ಇತ್ತು. ಇದಕ್ಕಾಗಿ ಹೈಕಮಾಂಡ್ ಸಾಕಷ್ಟು ಅಳೆದು ತೋಗಿ ನಿರ್ಧಾರ ತೆಗೆದುಕೊಂಡಿದೆ.
ಬಸವರಾಜ ಬೊಮ್ಮಾಯಿ
ಲಿಂಗಾಯತರ ಪೈಕಿ ನಾಲ್ಕು ಹೆಸರುಗಳು ಹೈಕಮಾಂಡ್ ಮುಂದೆಗೆ ಚರ್ಚೆಗೆ ಬಂದಿತ್ತು. ಶಿವಕುಮಾರ್ ಉದಾಸಿ, ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಮತ್ತು ಬಸವರಾಜ್ ಬೊಮ್ಮಾಯಿ ಹೆಸರು ಕೇಳಿ ಬಂದಿತ್ತು. ಬಳಿಕ ಸಂಸದರಿಗೆ ಪಟ್ಟ ಕಟ್ಟುವುದು ಬೇಡ ಅಂದುಕೊಂಡ ಹೈಕಮಾಂಡ್ ಮೂವರು ನಾಯಕರ ಹೆಸರು ಅಂತಿಮ ರೌಂಡ್ ಗೆ ತೆಗೆದುಕೊಂಡಿತ್ತು.
ಈ ಪೈಕಿ ಭ್ರಷ್ಟಾಚಾರ ಆರೋಪ ಸೇರಿ ಬೇರೆ ಬೇರೆ ವಿವಾದಗಳಲ್ಲಿ ಸಿಲುಕಿದ್ದ ಮುರುಗೇಶ್ ನಿರಾಣಿ ಆರ್‌ಎಸ್ಎಸ್ ಬೆಂಬಲ ನೀಡದ ಹಿನ್ನಲೆ ಅವರು ರೇಸ್‌ನಿಂದ ಹೊರ ಬಿದ್ದರು. ಅಂತಿಮವಾಗಿ ಅರವಿಂದ್ ಬೆಲ್ಲದ್ ಮತ್ತು ಬಸವರಾಜ್ ಬೊಮ್ಮಾಯಿ ನಡುವೆ ಪೈಪೋಟಿ ಹೆಚ್ಚಾಯಿತು. ಈ ಪೈಕಿ ಬೊಮ್ಮಾಯಿಗೆ ಹೈಕಮಾಂಡ್ ಮಣೆ ಹಾಕಿತು.
ಇದರ ಜೊತೆಗೆ ರಾಜ್ಯದಲ್ಲಿರುವಂತ ಆಡಳಿತಾತ್ಮಕ, ರಾಜಕೀಯ ಹಾಗೂ ಆರ್ಥೀಕ ಸಮಸ್ಯೆಗಳನ್ನು ನಿಭಾಯಿಸುವ ಸೂಕ್ತ ನಾಯಕ ಯಾರು ಎಂಬ ಗೊಂದಲವು ಹೈಕಮಾಂಡ್ ನಾಯಕರಲ್ಲಿತ್ತು. ಅಲ್ಲದೆ, ಲಿಂಗಾಯತ ನಾಯಕರನ್ನು ಆಯ್ಕೆ ಮಾಡಬೇಕಾ? ಅಥವಾ ಲಿಂಗಾಯತಯೇತರ ನಾಯಕರನ್ನು ಆಯ್ಕೆ ಮಾಡಬೇಕಾ ಎಂಬ ಚರ್ಚೆಯೂ ಹೈಕಮಾಂಡ್ ನಾಯಕರಲ್ಲಿತ್ತು. ಅಂತಿಮವಾಗಿ ಲಿಂಗಾಯತ ನಾಯಕರನ್ನೆ ಆಯ್ಕೆ ಮಾಡಬೇಕು ಎಂದು ನಿರ್ಧರಿಸಲಾಯಿತು.
ಈ ಪೈಕಿ ಅರವಿಂದ್ ಬೆಲ್ಲದ್, ಶಿವಕೂಮರ್ ಉದಾಸಿ, ಮುರಗೇಶ್ ನಿರಾಣಿ ಹಾಗೂ ಬಸವರಾಜ್ ಬೊಮ್ಮಾಯಿ ಹೆಸರುಗಳು
ಬ ಬೆಲ್ಲದ್. ಉದಾಸಿ, ನಿರಾಣಿ ಹೆಸರುಗಳು ಫೈನಲ್ ಹಂತಕ್ಕೆ ಬಂದು ತಲುಪಿವೆ. ಆದರೆ, ಶಾಸಕರಲ್ಲದ ಕಾರಣಕ್ಕೆ ಶಿವಕುಮಾರ್ ಉದಾಸಿಯವರ ಹೆಸರನ್ನು ಕೈಬಿಡಲಾಗಿದೆ. ಇನ್ನು, ಮುರುಗೇಶ್ ನಿರಾಣಿಯವರ ಮೇಲೆ ಭ್ರಷ್ಟಚಾರ ಆರೋಪಗಳಿರುವುದರಿಂದ ಹಾಗೂ ಬೇರೆ-ಬೇರೆ ಕಾರಣಗಳಿಂದಾಗಿ ಆರ್‌ಎಸ್‌ಎಸ್ ನಿರಾಣಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಅರವಿಂದ್ ಬೆಲ್ಲದ್ ಹಾಗೂ ಬಸವರಾಜ್ ಬೊಮ್ಮಾಯಿ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.
ಸಿಎಂ ಆಗಿ ಕಾರ್ಯನಿರ್ವಹಿಸಿಬೇಕಾದರೆ ರಾಜಕೀಯ ಅನಿಭವದ ಜೊತೆ ಆಡಳಿತಾತ್ಮಕ ಅನುಭವವೂ ಮುಖ್ಯ. ಈ ನಿಟ್ಟಿನಲ್ಲಿ ನೋಡುವುದಾದರೇ, ಬೆಲ್ಲದ್ ಅವರಿಗೆ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ಕಡಿಮೆ ಎಂಬ ಲೆಕ್ಕಾಚಾರ ಹೈಕಮಾಂಡ್ ಅವರದ್ದು. ಬೆಲ್ಲದ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಬೊಮ್ಮಾಯಿವರು ಮೂರು ಬಾರಿ ಶಾಸಕರಾಗಿ, ಪ್ರಮುಖ ಖಾತೆಗಳಾದ ಜಲ ಸಂಪನ್ಮೂಲ ಹಾಗೂ ಗೃಹ ಖಾತೆಯನ್ನು ನಿಭಾಯಿಸಿರುವ ಸುಧೀರ್ಘ ಅನುಭವವಿದೆ.
ಬಸವರಾಜ್ ಬೊಮ್ಮಾಯಿ ಮೃದು ಸ್ವಾಭವದ ಕಳಂಕರಹಿತ ವ್ಯಕ್ತಿ. ಹೀಗಾಗಿ, ವಿರೋಧ ಪಕ್ಷದವರನ್ನು ಎದುರಿಸುವ ಸಾಮರ್ಥ್ಯ ಬೊಮ್ಮಾಯಿಯವರಿಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಲಿಂಗಾಯತ ಮೀಸಲಾತಿ ಹೋರಾಟ ಚಾಲ್ತಿಯಲ್ಲಿದ್ದು, ಪಂಚಮ ಲಿಂಗಾಯತರು ಹಾಗೂ ಗಾಣಿಗ ಲಿಂಗಾಯತ ನಡುವೆ ಪೈಪೋಟಿ ಇದೆ. ಈ ಸಮುದಾಯದವರಿಗೆ ಸಿಎಂ ಸ್ಥಾನ ನೀಡಿದರೆ ಒಂದು ಸಮುದಾಯದ ವಿರೋಧ ಎದುರಿಸಬೇಕಾಗಬಹುದು. ಹೀಗಾಗಿ, ಸಾದರ ಲಿಂಗಾಯತ ಸಮುದಾಯದವರಾದ ಬಸವರಾಜ್ ಬೋಮ್ಮಾಯಿವರಿಗೆ ಸಿಎಂ ಸ್ಥಾನ ನೀಡಲು ಸಿರ್ಧರಿಸಲಾಗಿದೆ.
ಅರವಿಂದ್ ಬೆಲ್ಲದ್ ಆಯ್ಕೆಯಾಗಿದ್ದರೆ ಬಿಜೆಪಿ ಹಿರಿಯ ನಾಯಕ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇತ್ತು. ಆದರೆ, ಬೊಮ್ಮಾಯಿ ಮದ್ಯ ವಯಸ್ಕರಾಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಸಾಧ್ಯತೆ ಇದೆ. ಇವೆಲ್ಲದರ ಹೊರತಾಗಿ ರಾಜ್ಯದಲ್ಲಿ ಪ್ರವಾಹ ಹಾಗೂ ಕೊರೊನಾ ಆರ್ಥಿಕ ಸಾವಲುಗಳಿವೆ. ಮುಂದೆ ರಾಜ್ಯದಲ್ಲಿ ಎರೆಡೆರಡೂ ಚುನಾವಣೆಗಳಿದ್ದು, ಇವೆಲ್ಲಾವನ್ನು ಸಮರ್ಥವಾಗಿ ನಿಭಾಸುವ ಆಡಳಿತಾತ್ಮಕ ಅನುಭವವಿರುವ ಸೂಕ್ತ ವ್ಯಕ್ತಿ ಬಸವರಾಜ್ ಬೊಮ್ಮಾಯಿ ಎಂದು ನಿರ್ಧರಿಸಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಹೈಕಮಾಂಡ್ ಆಯ್ಕೆ ಮಾಡಿದೆ.