ಮುಂಬೈ: ರಾಜ್ ಕುಂದ್ರಾ ಬಂಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಟ್ರೋಲ್ ಗಳು ಹರಿದಾಡುತ್ತಿವೆ. ಹಂಗಮಾ-2 ಚಿತ್ರಕ್ಕೆ ಶುಭಕೋರಿದ್ದ ಶಮಿತಾ ಶೆಟ್ಟಿ ಟ್ವೀಟಿಗೆ ನೆಟ್ಟಿಗರು ಅಸಭ್ಯವಾಗಿ ಕಮೆಂಟ್ ಮಾಡಲಾರಂಭಿಸಿದ್ದಾರೆ.

ಶಮಿತಾ ಶೆಟ್ಟಿ ಟ್ವೀಟ್:
14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ಬಿಡುಗಡೆ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೀಯ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದೀಯ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್ ದಿ ಬೆಸ್ಟ್? ಎಂದು ಶಮಿತಾ ಟ್ವೀಟ್ ಮಾಡಿದ್ದರು.
2/2: Uve emerged stronger!… this too shall pass my darling . All the best to the entire team of #hungama2 only on @DisneyPlusHS @TheShilpaShetty pic.twitter.com/0tdIgDf9nw
— Shamita Shetty (@ShamitaShetty) July 23, 2021
ಶಮಿತಾ ಶೆಟ್ಟಿಯ ಈ ಟ್ವೀಟ್ ಗೆ, ಬೆಳಗ್ಗೆ ಅಕ್ಕ ಯೋಗ ಕಲಿಸ್ತಾರೆ, ರಾತ್ರಿಯ ಯೋಗವನ್ನು ರಾಜ್ ಕುಂದ್ರಾ ಕಲಿಸುತ್ತಾರೆಯೇ ಅಂತ ಬರೆದುಕೊಂಡಿದ್ದಾರೆ. ಮತ್ತೋರ್ವ ನೆಟ್ಟಿಗ ಈ ಶುಭ ಹಾರೈಕೆ ಶಿಲ್ಪಾ ಶೆಟ್ಟಿಗೆ ಅವಶ್ಯಕತೆ ಇದೆ ಎಂದು ಬರೆದ್ರೆ ಮತ್ತೋಬ್ಬರು ರಾಜ್ ಕುಂದ್ರಾ ಬಂಧನವಾಗಿದ್ದೇಕೆ ಎಂದು ಕೇಳಿದ್ದಾರೆ.

ಶನಿವಾರ ಪತಿ ಬಂಧನದ ಕುರಿತು ಪ್ರತಿಕ್ರಿಯಿಸಿದ್ದ ಶಿಲ್ಪಾ ಶೆಟ್ಟಿ, ಅವರು ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರಲಿಲ್ಲ. ಕಾಮಪ್ರಚೋದಕ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದರು. ಬೇರೆ ಓಟಿಟಿ ಪ್ಲಾಟ್‍ಫಾರಂಗಳಲ್ಲಿರುವ ಆಶ್ಲೀಲ ಸಿನಿಮಾಗಳು ಇವುಗಳು ಅಲ್ಲ ಅಂತ ಹೇಳಿದ್ದರು.