ಮುಂಬೈ: ನೀಲಿ ಚಿತ್ರಗಳ ನಿರ್ಮಾಣದ ಆರೋಪದಡಿ ಬಂಧನಕ್ಕೊಳಗಾಗಿರುವ ರಾಕ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಮೇಲೆ ಕಣ್ಣಿಟ್ಟಿದ್ದ ರಹಸ್ಯವೊಂದು ಹೊರ ಬಿದ್ದಿದೆ.
ಹೊಸದಾಗಿ ಬಿಡುಗಡೆ ಮಾಡಲಿರುವ ಆಪ್ ಚಲನಚಿತ್ರಕ್ಕೆ ಶಮಿತಾ ಶೆಟ್ಟಿಯನ್ನು ನಾಯಕಿಯಾಗಿ ಮಾಡಲು ರಾಜ್ ಕುಂದ್ರಾ ನಿರ್ಧರಿಸಿದ್ದರು ಎಂದು ನಟಿ ಗೆಹನಾ ವಸಿಷ್ಠ ಹೇಳಿದ್ದಾರೆ. ಬಾಲಿ ಫೇಮ್ ಹೆಸರಿನ ಆಪ್ ನಲ್ಲಿ ಚಾಟ್ ಶೋ, ರಿಯಾಲಿಟಿ ಶೋ, ಮ್ಯೂಸಿಕ್ ವೀಡಿಯೋ ರಿಲೀಸ್ ಮಾಡಲು ರಾಜ್ ಕುಂದ್ರಾ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದ ಮಾಹಿತಿಯನ್ನು ಗೆಹನಾ ರಿವೀಲ್ ಮಾಡಿದ್ದಾರೆ.

ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಈ ಮಧ್ಯೆ ಕುಂದ್ರಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಜುಲೈ 27ರ ವರೆಗೆ ವಿಸ್ತರಿಸಲಾಗಿದೆ. ಶುಕ್ರವಾರ ಶಿಲ್ಪಾ ಶೆಟ್ಟಿ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ನಟಿಯ ಲ್ಯಾಪ್‍ಟಾಪ್, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ.