ಕಣ್ಣಂಬಾಡಿ ಆಣೆಕಟ್ಟು ಬಿರುಕು ಆರೋಪ ಕುರಿತು ಸಂಸದೆ ಸುಮಲತಾ ಇಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿಯಾದರು. ಸಂಸದೆ ಸುಮಲತಾ ಅವರು ಕೆಲ ದಿನಗಳಿಂದ ಕೆಆರ್‌ಎಸ್ ಸುತ್ತ ಗಣಿಗಾರಿಕೆ ವಿರುದ್ಧ ಧ್ವನಿಯೆತ್ತಿದ್ದರು. ಇದು ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.
ಇದೀಗ ವೆಂಕಯ್ಯ ನಾಯ್ದು ಅವರ್ನು ಭೇಟಿಯಾಗಿರುವ ಸಂಸದೆ ಸುಮಲತಾ ಅವರು, ಗಣಿಗಾರಿಕೆಯಿಂದ ಆಣೆಕಟ್ಟಿಗೆ ಅಪಾಯವಿದೆ. ನೀರು ಮಾಲಿನ್ಯವಾಗುತ್ತಿದೆ, ಜೊತೆಗೆ ಪ್ರಾಣಿ ಸಂಕುಲಕ್ಕೂ ಅಪಾಯವಾಗುತ್ತೆ. ಬಂಡಿಪುರ – ನಾಗರಹೊಳೆ ಅಭಯಾರಣ್ಯಕ್ಕೂ ಅಪಾಯವಾಗುತ್ತೆ. ಕೂಡಲೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಸುಮಲತಾ ಆರೋಪಿಸಿದರು. ಈ ಹೇಳಿಕೆಗೆ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಮಂಡ್ಯ ಭಾಗದ ರಾಜಕೀಯ ನಾಯಕರು ಸಹ ವಿರೋಧ ವ್ಯಕ್ತಪಡಿಸಿದ್ದರು.