ಡಬಲ್ ಎಂಜಿನ್ ಸರ್ಕಾರ ಒಳ್ಳೆಯ ಆಡಳಿತ ಕೊಡಲಿಲ್ಲ
ಈಗ ಇಷ್ಟೊಂದು ಹಣ ಎಲ್ಲಿಂದ ಬಂತು?
ಮಂಗಳೂರು: ಒಳ್ಳೆಯ ಸರ್ಕಾರ ನೀಡಲು ಆಗದ್ದಕ್ಕೆ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಮಲ ಆಂತರಿಕ ಕಲಹದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಡಬಲ್ ಇಂಜಿನ್ ಸರ್ಕಾರ ರಾಜ್ಯದ ಜನತೆಗೆ ಒಳ್ಳೆತ ಆಡಳಿತ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ. ಇದೇ ಕಾರಣಕ್ಕೆ ಸಿಎಂ ಬದಲಾವಣೆ ಆಗ್ತಿದೆ ಎಂದರು. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ, ವಿಧಾನಸೌಧದವರೆಗೆ ಯಾರೂ ಮಾತು ಕೇಳ್ತಿಲ್ಲ. ಈಗ ತರಾತುರಿಯಲ್ಲಿ ಅನುದಾನ ಬಿಡುಗಡೆಯಾಗ್ತಿದೆ, ಫೈಲ್ ಗಳಿಗೆ ಸಹಿ ಆಗುತ್ತಿರೋದು ಯಾಕೆ ಎಂದು ಪ್ರಶ್ನೆ ಮಾಡಿದರು.
ನೀರಾವರಿ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಯ ಫೈಲ್ ಗಳು ಕ್ಲಿಯರ್ ಆಗ್ತಿದೆ. ಬಜೆಟ್ ನಲ್ಲಿ ಎಷ್ಟು ದುಡ್ಡು ಇಟ್ಟಿದ್ರಿ? ಈಗ ಎಷ್ಟು ಕ್ಲಿಯರ್ ಆಗ್ತಿದೆ? ಎರಡು ವರ್ಷದಿಂದ ಎಷ್ಟಾಗಿದೆ? ಈ ಬಗ್ಗೆ ಅಸೆಂಬ್ಲಿಯಲ್ಲಿ ದಾಖಲೆ ಸಮೇತ ನಾನು ಮಾತನಾಡ್ತೇನೆ. ಹಣಕಾಸು ಇಲಾಖೆ ದುಡ್ಡಿಲ್ಲ ಅಂತ ಪ್ರಾಜೆಕ್ಟ್ ಕ್ಲಿಯರ್ ಆಗ್ತಿರಲಿಲ್ಲ, ಈಗ ದುಡ್ಡು ಎಲ್ಲಿಂದ ಬಂತು? ಇವೆಲ್ಲಾ ಕೂಡ ದೊಡ್ಡ ಚರ್ಚೆಯಾಗಬೇಕು, ಇದನ್ನ ನಾನು ಚರ್ಚೆ ಮಾಡ್ತೀನಿ ಎಂದರು.
I join the state of Karnataka in praying for the speedy recovery of our RS MP and one of our senior most Congress leaders Sh. Oscar Fernandes, who has been a pillar of strength for the party.
— DK Shivakumar (@DKShivakumar) July 22, 2021
My thoughts are with his family. May God give them strength in this difficult hour. pic.twitter.com/Zt4ypf3gPw
ಕಾಂಗ್ರೆಸ್ ಗೆ ಯಾರಾದ್ರೂ ಬರೋರಿದ್ರೆ ಅರ್ಜಿ ಹಾಕಲಿ, ಆ ಮೇಲೆ ಕೂತು ಮಾತನಾಡೋಣ. ಈಗ ಇದರ ಬಗ್ಗೆ ಸುಮ್ಮನೆ ಮಾತನಾಡಲ್ಲ, ಹೋದವರು, ಇರೋರು ಬರ್ತಾರೆ ಅನ್ನೋದಲ್ಲ. ಯಾವುದೇ ಇದ್ದರೂ ಪಕ್ಷದ ಕಾನೂನಿನಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಠಾಧೀಶರು ಅವರ ಅಭಿಪ್ರಾಯ ಹೇಳ್ತಿದಾರೆ, ಬಿಜೆಪಿಗೆ ಮತ ಹಾಕಿಲ್ಲ ಯಡಿಯೂರಪ್ಪನವರಿಗೆ ಅಂತ ಹೇಳುತ್ತಿದ್ದು, ಅವರ ನಡೆಯನ್ನು ತಪ್ಪು ಅಂತ ನಾನು ಹೇಳಲ್ಲ ಎಂದರು.
ನಿನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಆರೋಗ್ಯ ವಿಚಾರಿಸಿದ್ದರು. ಹಾಗೆಯೇ ವೈದ್ಯರಿಂದ ಫೆನಾರ್ಂಂಡಿಸ್ ಆವರ ಆರೋಗ್ಯದ ಮಾಹಿತಿ ಸಹ ಪಡೆದುಕೊಂಡು, ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದರು.