ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ತಂಪಾದ ವಾತಾವರಣ ಇದೆ. ಹೊರಗೆ ಹೋದ್ರೆ ಎಲ್ಲಿ ಮಳೆಯಲ್ಲಿ ಸಿಲುಕಿಕೊಳ್ಳತ್ತೀವಾ ಅನ್ನೋ ಭಯ. ಸಂಜೆ ಆದ್ರೆ ಸಾಕು ಕುರುಕಲು ತಿಂಡಿ ಬಯಸುವ ಆಹಾರ ಪ್ರಿಯರಿಗೆ ಇಲ್ಲಿದೆ ಸ್ಪೆಷಲ್ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
ಸಣ್ಣ ರವೆ- 1 ಕಪ್
ಆಲೂಗಡ್ಡೆ-1
ಅಕ್ಕಿ ಹಿಟ್ಟು- 2 ಟೀ ಸ್ಪೂನ್
ಜೀರಿಗೆ- 1 ಟೀ ಸ್ಪೂನ್
ಅಚ್ಚ ಖಾರದ ಪುಡಿ- 1 ಟೀ ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು
ಕೋತಂಬರಿ ಸೊಪ್ಪು
ಎಣ್ಣೆ

ಬೇಕಾಗುವ ಸಾಮಾಗ್ರಿಗಳು
- ಮೊದಲಿಗೆ ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಒಂದೂವರೆ ಕಪ್ ನೀರು ಹಾಕಿ. ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಿಸಿ ಮಾಡಿ. ನೀರು ಕುದಿಯುತ್ತಿದ್ದಂತೆ ರವೆ ಸೇರಿಸಿ ಚೆನ್ನಾಗಿ ಬೇಯಿಸಿ ತಣ್ಣಗಾಗಲು ಬಿಡಿ.
- ಕುದಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ.
- ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಬೇಯಸಿದಿ ರವೆ ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಂಡು ಅಕ್ಕಿ ಹಿಟ್ಟು, ಜೀರಿಗೆ, ಅಚ್ಚ ಖಾರದ ಪುಡಿ, ಕೋತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಮಿಶ್ರಣ ಚಪಾತಿ ಮಾಡಿಕೊಳ್ಳುವ ಹಿಟ್ಟಿನ ಹದಕ್ಕೆ ಬರಬೇಕು.
- ರೆಡಿಯಾದ ಮಿಶ್ರಣದಿಂದ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು ತೆಳ್ಳಗಾಗಿ ರೋಲ್ ಮಾಡಿ. ಈ ರೋಲ್ ನ್ನು ಚಕ್ಕಲಿ ಆಕಾರದಲ್ಲಿ ರೌಂಡ್ ಶೇಪ್ ನಲ್ಲಿ ಮಾಡಿಟ್ಟುಕೊಳ್ಳಿ.
- ಮತ್ತೊಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ವಡೆ ಕರಿಯಲು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
- ಎಣ್ಣೆ ಬಿಸಿಯಾಗ್ತಿದ್ದಂತೆ ಸ್ಟೌವ್ ಸ್ಲೋ ಮಾಡಿಕೊಂಡು ರೌಂಡ್ ಶೇಪ್ ಮಾಡಿಕೊಂಡ ವಡೆಯನ್ನ ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಿದ್ರೆ ಕ್ರಿಸ್ಪಿ ಆಲೂ ವಡೆ ರೆಡಿ.