ಬೆಂಗಳೂರು : ಕೊರೋನಾ ಭೀತಿಯ ನಡುವೆ ಇಂದಿನಿಂದ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆಗಳು ಆರಂಭವಾಗಲಿದೆ. ಎರಡೇ ದಿನಗಳಲ್ಲಿ ಆರು ವಿಷಯಗಳಿಗೆ ಪರೀಕ್ಷೆ ನಡೆಸುವ ಮೂಲಕ ಶಿಕ್ಷಣ ಇಲಾಖೆ ಇತಿಹಾಸದಲ್ಲೆ ಮೊದಲ ಬಾರಿ ಹೊಸ ದಾಖಲೆಯೊಂದನ್ನು ಬರೆಯಲಾಗಿದೆ.
ದಿನ ಒಂದಕ್ಕೆ ಮೂರು ವಿಷಯಗಳಿಗೆ ನಡೆಯಲಿರುವ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಕ್ಕೂ 40 ಅಂಕ ನಿಗಧಿ ಮಾಡಲಾಗಿದೆ. ಮೂರು ವಿಷಯ ಸೇರಿ 120 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ವಿಷಯಕ್ಕೂ ಒಂದು ಗಂಟೆಗಳ ಕಾಲಾವಕಾಶ ನೀಡಲಾಗಿದೆ.
ಬೆಳಗ್ಗೆ 10:30 ರಿಂದ 1:30ರವರೆಗೂ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಕ್ಕೂ ಬಹು ಆಯ್ಕೆ ಪ್ರಶ್ನೆಗಳ ನೀಡುವ ಮೂಲಕ ಕೊರೊನಾ ಭೀತಿಯ ನಡುವೆ ಸರಳವಾಗಿ ಪರೀಕ್ಷೆ ನಡೆಸಲು ಪ್ಲ್ಯಾನ್ ಮಾಡಿದೆ. ಮೊದಲ ದಿನವಾದ ಇಂದು ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಜುಲೈ 22ರಂದು ಕನ್ನಡ,ಇಂಗ್ಲಿಷ್, ತೃತೀಯ ಭಾಷೆಗೆ ಪರೀಕ್ಷೆ ನಡೆಯಲಿದ್ದು, ರಾಜ್ಯಾದ್ಯಂತ 14,929 ಫ್ರೌಡ ಶಾಲೆಗಳಿಂದ 7.83 ಹೊಸ ವಿದ್ಯಾರ್ಥಿಗಳು ಸೇರಿ, 8,76,508 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
4885 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆ ನಡೆಯಲಿದ್ದು 4.72 ಲಕ್ಷ ಬಾಲಕರು, 4.03 ಲಕ್ಷ ಬಾಲಕಿಯರು ಇರಲಿದ್ದಾರೆ. ಪರೀಕ್ಷೆ ಕೇಂದ್ರಗಳ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಪರೀಕ್ಷೆ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಲಾಗಿದ್ದು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ.