ಹಿಂದಿ ಕಿರುತರೆಯ ದಿಗ್ಗಜ ನಟಿ ಸುರೇಖಾ ಸಿಕ್ರಿ(75) ಹೃದಯಘಾತದಿಂದ ನಿಧನರಾಗಿದ್ದಾರೆ. ಇವರಿಗೆ ಮೂರು ಬಾರಿ ನ್ಯಾಷನಲ್ ಅವಾರ್ಡ್ ಲಭಿಸಿದೆ. ಹಿಂದಿಯ ಪ್ರಸಿದ್ದ ಧಾರಾವಾಹಿ ಬಾಲಿಕಾ ವಧುವಿನಲ್ಲಿ ಸುರೇಖಾ ದಾದಿ ಸಾ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದಿಂದ ಸುರೇಖಾ ಭಾರಿ ಜನಮನ್ನಣೆಗೆ ಪಾತ್ರರಾಗಿದ್ದರು. ಬಾಲಿಕಾ ವಧು ಧಾರಾವಾಹಿ ಕನ್ನಡದಲ್ಲಿ ‘ಪುಟ್ಟ ಗೌರಿ ಮದುವೆ’ ಎಂಬ ಶಿರ್ಷಿಕೆಯಡಿ ಪ್ರಸಾರವಾಗಿ ಪ್ರಸಿದ್ದಿಯಾಗಿತ್ತು.

ಸುರೇಖಾ ಸಿಕ್ರಿ ಈ ಹಿಂದೆ 2018 ರಲ್ಲಿ ಮಹಾಬಲೇಶ್ವರದಲ್ಲಿ ಟಿವಿ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಬ್ರೈನ್ ಸ್ಟ್ರೋಕ್ ಒಳಗಾಗಿದ್ದರು. ಚಿತ್ರಿಕರಣದ ವೇಳೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿತ್ತು. ನಂತರ ಚೇತರಿಸಿಕೊಂಡು ಚಿತ್ರಿಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದ ವರ್ಷ ಕೊರೊನಾ ವೇಳೆ 65ವರ್ಷದ ಮೇಲ್ಪಟ್ಟವರು ಚಿತ್ರಿಕರಣದಲ್ಲಿ ಭಾಗವಹಿಸುವಂತಿಲ್ಲ ಎಂಬ ಆದೇಶದ ವಿರುದ್ಧ ಹೋರಾಟ ನಡೆಸಿದ್ದರು.

ಈ ಬಾರಿಯ ಲಾಕ್ ಡೌನ್ ಸಮಯದಲ್ಲಿ ಸುರೇಖಾ ಅವರಿಗೆ ಎರಡನೇ ಭಾರಿಗೆ ಮತ್ತೆ ಪಾರ್ಶ್ವವಾಯುಗೆ ಒಳಗಾಗಿದ್ದರು. ನಂತರ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಆದರೆ, ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.
Your voice. Your poise. Rest in peace
— Sunchika Pandey/संचिका पाण्डेय (@PoliceWaliPblic) July 16, 2021
#SurekhaSikri pic.twitter.com/saGYcyYRBm
ಸುರೇಖಾ ಸಿಕ್ರಿ 1978ರಿಂದಲೂ ಭಾರತೀಯ ರಂಗಭೂಮಿ, ಚಲನಚಿತ್ರ ಮತ್ತು ಕಿರುತರೆಯಲ್ಲಿ ಸಕ್ರಿಯರಾಗಿದ್ದರು. 1978ರಲ್ಲಿ ‘ಕಿಸ್ಸಾ ಕುರ್ಸಿ ಕಾ’ದಲ್ಲಿ ನಾಟಕದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಯುಪಿಯಲ್ಲಿ ಜನಿಸಿದ ಸುರೇಖಾ 1971 ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ನಟನೆಯನ್ನು ಕಲಿತಿದ್ದರು. ಕೊನೆಯ ಬಾರಿಗೆ ಜೋಯಾ ಅಖ್ತರ್ ಅವರ ಘೋಸ್ಟ್ ಸ್ಟೋರೀಸ್ನಲ್ಲಿ ಕಾಣಿಸಿಕೊಂಡಿದ್ದಾರೆ.