ಬೆಂಗಳೂರು: ದರ್ಶನ್ ಮತ್ತು ಆಪ್ತರಿಂದ ಹಲ್ಲೆಗೊಳಗಾದ ವೇಟರ್ ಕಣ್ಣಿನ ಭಾಗ ಬ್ಲರ್ ಆಗುತ್ತಿದೆ. ಹಲ್ಲೆಯ ಮರುದಿನ ವೇಟರ್ ಹೆಂಡ್ತಿ ಪೊರಕೆ ಹಿಡಿದುಕೊಂಡು ಬಂದಾಗ ಅಲ್ಲಿ ದರ್ಶನ್ ಜೊತೆ ಪವಿತ್ರ ಗೌಡ ಸಹ ಇದ್ರು ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಇಂದ್ರಜಿತ್ ಲಂಕೇಶ್, ಅವರ ತಲೆ ಕಡ್ತೀನಿ ಅಂತ ಹೇಳಿದ ದರ್ಶನ್ ಅಮಾಯಕ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿರುವ ಮಾಹಿತಿ ನನಗೆ ಬಂದಿದೆ. ಮರುದಿನ 50 ಸಾವಿರ ರೂಪಾಯಿ ನೀಡಿ ರಾಜಿ ಮಾಡ್ಕೊಂಡಿದ್ದಾರೆ. ಹಾಗಾದ್ರೆ ಪೊಲೀಸ್ ಠಾಣೆಗಳು ರಾಜೀ ಮಾಡುವ ವೇದಿಕೆಗಳಾ ಎಂದು ಪ್ರಶ್ನೆ ಮಾಡಿದರು.

ಸಾಲದಲ್ಲಿ ಒಂದು ಬೈಕ್ ತೊಗೊಂಡ್ರೆ ಬ್ಯಾಂಕ್ ನವರು ನೂರು ಕಡೆ ಸಹಿ ಮಾಡಿಕೊಳ್ತಾರೆ. ಇದು 25 ಕೋಟಿ ರೂ. ವಂಚನೆ ಕೇಸ್. ಸಾಮಾನ್ಯ ವ್ಯಕ್ತಿಗಳಾಗಿದ್ರೆ ಅರೆಸ್ಟ್ ಮಾಡ್ತಿದ್ರು. ಇಂತಹ ಪ್ರಕರಣದಲ್ಲಿ ಅರೆಸ್ಟ್ ಆದ್ರೆ ಬೇಲ್ ಸಹ ಸಿಗಲ್ಲ. ಆದ್ರೆ ಇದು ಹೇಗೆ ಸುಖಾಂತ್ಯ ಆಗುತ್ತೆ? ಆರ್.ಆರ್.ನಗರದ ಆರ್ಚ್ ಬಳಿ ಅರುಣಾ ಕುಮಾರಿಯನ್ನ ಕಾರ್ ನಲ್ಲಿ ಕೂರಿಸಿಕೊಂಡು ಬೆದರಿಕೆ ಹಾಕಿದ್ದು, ಇದೇ ದರ್ಶನ್ ಬೆಂಬಲಿಗರು ಅಲ್ವಾ ಎಂದು ಸ್ಫೋಟಕ ಹೇಳಿಕೆ ನೀಡಿದರು.