ಬ್ರೆಜಿಲ್, ಭಾರತದಲ್ಲಿಯೇ ಅತ್ಯಧಿಕ ಪ್ರಕರಣಗಳು
ನವದೆಹಲಿ: 9 ವಾರದ ಬಳಿಕ ವಿಶ್ವದಲ್ಲಿ ಮತ್ತೊಮ್ಮೆ ಕೊರೊನಾ ಹೊಸ ಪ್ರಕರಣಗಳು ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ಹೊರ ಹಾಕಿದೆ. ಮೊದಲ ಸ್ಥಾನದಲ್ಲಿ ಬ್ರೆಜಿಲ್ ಮತ್ತು ಎರಡನೇ ಸ್ಥಾನದಲ್ಲಿ ಭಾರತವಿದೆ.
ಡಬ್ಲ್ಯೂಹೆಚ್‍ಓ ಜುಲೈ 5ರಿಂದ ಜುಲೈ 11ರ ನಡುವಿನ ಕೊರೊನಾ ಅಂಕಿ ಅಂಶಗಳನ್ನು ಮೇಲೆ ಅಧ್ಯಯನ ನಡೆಸಿದೆ. ಈ ವಾರದಲ್ಲಿ ವಿಶ್ವದಲ್ಲಿ 30 ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಅಂದ್ರೆ ಕಳೆದ ವಾರಕ್ಕಿಂತವ ಶೇ.11ರಷ್ಟು ಹೆಚ್ಚು. ಇದೇ ವಾರದಲ್ಲಿ 55 ಸಾವಿರಕ್ಕೂ ಹೆಚ್ಚು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ.3ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬ್ರೆಜಿಲ್, ಭಾರತ ಮತ್ತು ಇಂಡೋನೆಶಿಯಾ ಮೊದಲ ಮೂರು ಸ್ಥಾನದಲ್ಲಿವೆ. ಬ್ರೆಜಿಲ್ 3.33 ಲಕ್ಷ, ಭಾರತ 2.91 ಲಕ್ಷ ಮತ್ತು ಇಂಡೋನೆಶಿಯಾದಲ್ಲಿ 2.10 ಲಕ್ಷ ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇನ್ನೂ ನಾಲ್ಕನೇ ಸ್ಥಾನದಲ್ಲಿರುವ ಕೋಲಂಬಿಯಾದಲ್ಲಿ 1.74 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಈಗಾಗಗಲೇ 111 ದೇಶದಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡು ಬಂದಿವೆ. ಅನ್‍ಲಾಕ್ ಬಳಿಕ ನಿಧಾನವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗ್ತಿದೆ.