ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ 4 ದಿನಗಳು ಉಳಿದಿವೆ. ಹೀಗಾಗಿ, ಶ್ರೀಲಂಕಾ ತಂಡ ಅಭ್ಯಾಸವನ್ನು ನಡೆಸುತ್ತಿದ್ದು, ಕ್ರಿಡಾಂಗಣದಿಂದ ವಿಭಿನ್ನವಾದ ದೃಶ್ಯವೊಂದು ಕಂಡುಬಂದಿದೆ. ಕೊರೊನಾ ಸಮಯದಲ್ಲಿ ಶ್ರೀಲಂಕಾದ ತರಬೇತುದಾರರು ಪಿಪಿಇ ಕಿಟ್ ತೊಟ್ಟು, ಮಾಸ್ಕ್, ಕೈಗವಸುಗಳನ್ನು ಧರಿಸಿ ಅಭ್ಯಾಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ, ಲಂಕಾ ತಂಡದ ಬ್ಯಾಟಿಂಗ್ ತರಬೇತುದಾರ ಗ್ರಾಂಟ್ ಫ್ಲವರ್ ಮತ್ತು ಡೇಟಾ ವಿಶ್ಲೇಷಕ ಜಿಟಿ ನಿರೋಷನ್ ಅವರಿಗೆ ಕರೋನಾ ಪಾಸಿಟಿವ್ ಆಗಿತ್ತು. ಇವರ ಜೊತೆಗೆ ಶ್ರೀಲಂಕಾ ತಂಡದ ಸದಸ್ಯರೂ ಸೋಂಕಿಗೆ ಒಳಗಾಗಿದ್ದರು. ಅಂದಿನಿಂದ ಎಲ್ಲಾ ಸಿಬ್ಬಂದಿ ಭಯಭೀತರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪಿಪಿಇ ಕಿಟ್ ಧರಿಸಿ ಅಭ್ಯಾಸ ನಡೆಸುತ್ತಿರುವ ಡಿಯೊವನ್ನು ಸಹ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ತರಬೇತುದಾರರು ಮತ್ತು ಸಿಬ್ಬಂದಿ ಕಿಟ್ ಧರಿಸಿರುವುದು ಕಂಡುಬರುತ್ತದೆ.
📽️Indian white ball tour of Sri Lanka 2021 #SLvIND 🏏 pic.twitter.com/4rStZAiYaG
— Sri Lanka Cricket 🇱🇰 (@OfficialSLC) July 14, 2021
ಕೊರೊನಾ ಕಾರಣದಿಂದಾಗಿಯೇ ನಡುಯುತ್ತಿದ್ದ ಸರಣಿಯನ್ನ ಮುಂದೂಡಲಾಗಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ 3 ಏಕದಿನ ಪಂದ್ಯಗಳು ಜುಲೈ 18, 20 ಮತ್ತು 23 ರಂದು ನಡೆಯಲಿದೆ. ಇದರ ನಂತರ ಉಭಯ ತಂಡಗಳು ಜುಲೈ 25, 27 ಮತ್ತು 29 ರಂದು ಮೂರು ಪಂದ್ಯಗಳ ಟಿ 20 ಸರಣಿಯನ್ನು ಆಡಲಿವೆ. ಎಲ್ಲಾ ಪಂದ್ಯಗಳು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರೊಂದಿಗೆ ಎಲ್ಲಾ ಪಂದ್ಯಗಳ ಸಮಯವನ್ನು ಸಹ ಬದಲಾಯಿಸಲಾಗಿದೆ.