ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವ ನಡೆಯುತ್ತಿದ್ದು, ರೂಪದರ್ಶಿಯರು ಡಿಸೈನರ್ ಬಟ್ಟೆಗಳಿಂದಲೇ ವೇದಿಕೆಯನ್ನ ಝಗಮಗಗೊಳಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ರೂಪದರ್ಶಿ ಬೆಲ್ಲಾ ಹ್ಯಾಡಿಡ್ ಉಡುಪು ಸೆಂಟರ್ ಆಫ್ ಅಟ್ರ್ಯಾಕ್ಸನ್ ಆಗಿತ್ತು.

ಉದ್ದನೆಯ ಕಪ್ಪು ಬಣ್ಣದ ಗೌನ್ ತೊಟ್ಟಿದ್ದು, ಎದೆ ಭಾಗದ ಸಂಪೂರ್ಣ ಓಪನ್ ಆಗಿತ್ತು. ಆದ್ರೆ ಕೊರಳಲ್ಲಿ ದೊಡ್ಡ ನೆಕ್ಲೆಸ್ ಧರಿಸಿ ಎದೆ ಭಾಗ ಮುಚ್ಚುವಂತಾಗಿತ್ತು.

ಗೋಲ್ಡನ್ ಕಲರ್ ವುಳ್ಳ ಈ ನೆಕ್ಲೇಸ್ ಬೆಲ್ಲಾ ಹ್ಯಾಡಿಡ್ ಸೌಂದರ್ಯವನ್ನು ಹೆಚ್ಚು ಮಾಡಿತ್ತು.

ಡೇನಿಯಲ್ ರೋಸ್‍ಬೆರ್ರಿ ಈ ಗೌನ್ ಅನ್ನು ವಿನ್ಯಾಸ ಮಾಡಿದ್ದು, ಬೆಲ್ಲಾ ಅವರ ಈ ಹಾಟ್ ಲುಕ್ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಕಪ್ಪು ಬಣ್ಣದ ಗೌನ್, ಗೋಲ್ಡನ್ ಡಿಸೈನರ್ ನೆಕ್ಲೇಸ್ ಧರಿಸಿ ಬೆಲ್ಲಾ ಹೆಜ್ಜೆ ಹಾಕಿದ್ರೆ, ನೋಡುಗರ ದೃಷ್ಟಿ ಅವರ ಮೇಲೆಯೇ ಕೇಂದ್ರಕೃತವಾಗಿತ್ತು.

ಫ್ರಾನ್ಸ್ ನಲ್ಲಿ ನಡೆಯುತ್ತಿರುವ 74ನೇ ಕೇನ್ಸ್? ಫಿಲಂ ಫೆಸ್ಟಿವಲ್?ನಲ್ಲಿ ಬೆಲ್ಲಾ ತಮ್ಮ ಲುಕ್ಸ್?ಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ.