ನವದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮತ್ತೆ ಜೋರಾಗಲಿದೆ. ಕೊರೊನಾ ಎರಡನೇ ಅಲೆಯಿಂದ ತಣ್ಣಗಾಗಿದ್ದ ಪ್ರತಿಭಟನೆಯನ್ನು ಮತ್ತೆ ತೀವ್ರಗೊಳಿಸಲು ನಿರ್ಧರಿಸಿದ್ದು, ಜುಲೈ 22 ರಿಂದ ಪ್ರತಿಭಟನೆ ಮತ್ತೆ ಕಾವು ಪಡೆದುಕೊಳ್ಳಲಿದೆ.
संसद अगर अहंकारी और अड़ियल हो तो देश में जनक्रांति निश्चित होती है।#farmersprotest_atparliament @AHindinews @PTI_News @htTweets @abhisar_sharma @Kisanektamorcha @ABPNews @aajtak @news24tvchannel @ndtv @the_hindu @thewire_in @bstvlive @QuintHindi @OfficialBKU pic.twitter.com/7skPYXleJl
— Rakesh Tikait (@RakeshTikaitBKU) July 13, 2021
ಕೃಷಿ ಕಾನೂನುಗಳ ವಾಪಸ್ ಪಡೆಯುವ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತರೊಂದಿಗೆ ನಡೆಸುತ್ತಿದ್ದ ಸಂಧಾನ ಮಾತುಕತೆ ನಿಲ್ಲಿಸಿದೆ. ಈ ಹಿನ್ನಲೆ ಪ್ರತಿಭಟನಾಕಾರರು ಸಂಸತ್ ಮುಂದೆಯೇ ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ.
ಜುಲೈ 19 ರಿಂದ ಮುಂಗಾರು ಸಂಸತ್ ಅಧಿವೇಶನ ಆರಂಭಗೊಳ್ಳಲಿದ್ದು, ಜುಲೈ 22 ರಿಂದ ನಿತ್ಯ 200 ಮಂದಿ ರೈತರು ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಕಳೆದ ಜನವರಿ 26 ರಂದು ಪ್ರತಿಭಟನೆ ದಿಕ್ಕು ತಪ್ಪಿದ ಹಿನ್ನಲೆ ಈ ಬಾರಿ ಸೀಮಿತ ಸಂಖ್ಯೆಯಲ್ಲಿ ತಂಡಗಳಾಗಿ ರೈತರು ಪ್ರತಿಭಟನೆ ನಡೆಸಲು ಇಚ್ಛಿಸಿದ್ದು, ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಪ್ರತಿಭಟನೆ ನಡೆಯಲಿದೆ ಎನ್ನಲಾಗಿದೆ.
The farmers protest will continue. Centre is not willing for talks. We will go to Delhi on July 22 and sit outside the Parliament. 200 people will go everyday: Bharatiya Kisan Union (BKU) leader Rakesh Tikait pic.twitter.com/ufVQTNeUcS
— ANI (@ANI) July 13, 2021
ಈ ಬಗ್ಗೆ ರೈತ ಮುಖಂಡ ರಾಕೇಶ್ ಠಿಕಾಯತ್ ಟ್ವಿಟ್ ಮಾಡಿದ್ದು, ಪೊಸ್ಟರ್ ನಲ್ಲಿ ಸಂಸತ್ ಮುಂದೆ ಪ್ರತಿಭಟನೆ ನಡೆಸುವ ಮಾಹಿತಿ ನೀಡಿದ್ದಾರೆ. ಕೊರೊನಾ ಬಳಿಕ ಮತ್ತೆ ಶುರುವಾಗಿರುವ ಪ್ರತಿಭಟನೆ ಮತ್ತೆ ಕಾವು ಪಡೆದುಕೊಳ್ಳುವ ಸಾಧ್ಯತೆ ಇದ್ದು ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿದೆ.