ನೆದರ್ ಲ್ಯಾಂಡ್: ವಿಶ್ವದ ಅತಿ ದುಬಾರಿ ಬೆಲೆ ಬರ್ಗರ್ ಮಾರಕ್ಕೀಡಲಾಗಿದೆ ಈ ಬರ್ಗರ್ ಗೆ ದಿ ಗೋಲ್ಡನ್ ಬಾಯ್ ಎಂದು ಹೆಸರಿಡಲಾಗಿದೆ.
ಯೂರೊ ನ್ಯೂಸ್ ಪ್ರಕಾರ ಈ ಬರ್ಗರ್ ಬೆಲೆ 5 ಸಾವಿರ ಪೌಂಡ್ ಅಂದ್ರೆ 4 ಲಕ್ಷದ 47 ಸಾವಿರ ರೂಪಾಯಿ. ಇಷ್ಟು ಹಣದಲ್ಲಿ ರೊಲೆಕ್ಸ್ ವಾಚ್ ಖರೀದಿಸಬಹುದು. ವೈರ್ಥಇಜೈನೆ ನಲ್ಲಿರುವ ಔಟ್‍ಲೆಟ್ ಡಿ ಡಾಲ್ಟನ್ಸ್ ಫುಡ್ ಹಂಟ್ ಈ ವಿಶೇಷ ಬರ್ಗರ್ ತಯಾರಿಸಿದೆ. ಈ ಫುಡ್ ಹಂಟ್ ಮಾಲೀಕ ಜಾನ್ ಡಿ ವಿನ್, ನನಗೆ ಬಾಲ್ಯದಿಂದಲೂ ವಿಶ್ವ ದಾಖಲೆಯನ್ನ ಬ್ರೇಕ್ ಮಾಡೋದು ಕನಸಾಗಿತ್ತು. ಇಂದು ಈ ಕನಸು ಸಾಕಾರಾಗೊಳ್ಳುತ್ತಿದೆ ಎಂದು ಹೇಳುತ್ತಾರೆ.
ಏನಿದರ ವಿಶೇಷತೆ?:
ಈ ಬರ್ಗರ್ ಬನ್ ಚಿನ್ನದ ಲೇಯರ್ ಒಳಗೊಂಡಿರುತ್ತದೆ. ಜೊತೆಗೆ ಟ್ರಫಲ್, ಕಿಂಗ್ ಕ್ರ್ಯಾಬ್, ಕೈವಿಯಾರ್ (ಸ್ಟಾರ್ಜಿಯನ್ ಹೆಸರಿನ ಮೀನಿನ ಮೊಟ್ಟೆ), ಒಂದು ಡಕ್ ಎಗ್ ಮತ್ತು ಡೊಮೆ ಪೆರಿಗಾನ್ ಇರುತ್ತದೆ. ಎಲ್ಲ ಬರ್ಗರ್ ನಂತೆ ಇದನ್ನು ಕೈಯಲಿ ಹಿಡಿದು ತಿನ್ನಬಹುದಾಗಿದೆ.
ಈ ಮೊದಲು ಅಮೆರಿಕಾದ ಜೂಸಿಜ್ ಔಟ್‍ಲೆಟ್ ಗ್ರಿಲ್ ಹೆಸರಿನ ರೆಸ್ಟೋರೆಂಟ್ 42,000 ಪೌಂಡ್ ಬರ್ಗರ್ ತಯಾರಿಸಿತ್ತು.