ನವದೆಹಲಿ : ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆಸಿರುವ ಝೈಡಸ್ ಕ್ಯಾಡಿಲಾ ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ವರದಿಗಳನ್ನು ಸಲ್ಲಿಸಿದ್ದು ಶೀಘ್ರದಲ್ಲೇ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆಗಳಿದೆ.
Emergency approval of Zydus Cadila's #COVID19 vaccine will take a few more days: Sources
— ANI (@ANI) July 12, 2021
ಭಾರತೀಯ ಔಷಧಗಳ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು ವಿಷಯ ತಜ್ಞರ ಸಮಿತಿ ಈ ವರದಿಗಳನ್ನು ಪರಿಶೀಲನೆ ನಡೆಸುತ್ತಿದೆ. ಮೂಲಗಳ ಪ್ರಕಾರ ಈ ವಾರಾಂತ್ಯದಲ್ಲಿ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

ಝೈಡಲ್ ಕ್ಯಾಡಿಲಾ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ್ದು ಮೂರು ಹಂತಗಳಲ್ಲಿ ಪ್ರಯೋಗ ನಡೆಸಿದೆ. ಈ ವ್ಯಾಕ್ಸಿನ್ ಅನುಮತಿ ಸಿಕ್ಕಲ್ಲಿ ಭಾರತದ ಮೊದಲ ಮಕ್ಕಳ ವ್ಯಾಕ್ಸಿನ್ ಇದಾಗಲಿದೆ. ಭಾರತ್ ಬಯೋಟೆಕ್ ಸಂಸ್ಥೆ ತನ್ನ ಕೊವ್ಯಾಕ್ಸಿನ್ ಲಸಿಕೆಯನ್ನ ಮಕ್ಕಳ ಮೇಲೆ ಪ್ರಯೋಗ ನಡೆಸುತ್ತಿದೆ.