ಚೆನೈ : ಸಕ್ರಿಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದ ನಟ ರಜನಿಕಾಂತ್ ಇಂದು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ತಮ್ಮ ರಜನಿ ಪೀಪಲ್ಸ್ ಪೋರಂ ಪಕ್ಷವನ್ನು ವಿಸರ್ಜಿಸಿದ್ದಾರೆ. ಇಂದು ಅಭಿಮಾನಿಗಳೊಂದಿಗೆ ನಡೆಸಿದ ಸಭೆಯ ಬಳಿಕ ರಜನಿಕಾಂತ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಪಕ್ಷದ ಭವಿಷ್ಯದ ಬಗ್ಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಗೊಂದಲಗಳು ಸೃಷಿಯಾಗಿದ್ದವು. ಈ ಹಿನ್ನಲೆ ಇಂದು ರಜನಿಕಾಂತ್ ಅಭಿಮಾನಿಗಳು ಮತ್ತು ಪಕ್ಷದ ಪ್ರಮುಖ ಪದಾಧಿಕಾರಿಗಳ ಸಭೆ ಕರೆದಿದ್ದರು.
"I have decided to dissolve Rajini Makkal Mandram. The office-bearers of the Rajinikanth Makkal Mandram would continue to be part of the Rajinikanth Fan Club Association that will involve itself in public service," says Rajinikanth
— ANI (@ANI) July 12, 2021
ಸಭೆಯಲ್ಲಿ ರಜನಿಕಾಂತ್ ಆರೋಗ್ಯದ ಕಾರಣಗಳಿಂದ ಭವಿಷ್ಯದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗದಿರಲು ನಿರ್ಧಾರಿಸುವುದಾಗಿ ಹೇಳಿದರು. ಈ ಹಿನ್ನಲೆ ರಾಜಕೀಯ ಪಕ್ಷವಾದ ರಜನಿ ಪೀಪಲ್ಸ್ ಪೋರಂ ವಿಸರ್ಜಿಸುತ್ತಿರುವುದಾಗಿ ತಿಳಿಸಿದರು.
ಆದರೆ ರಜನಿ ಪೀಪಲ್ಸ್ ಪೋರಂನ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ರಜನಿಕಾಂತ್ ಫ್ಯಾನ್ ಚಾರಿಟಿ ಫೋರಂನ ಜೊತೆಗೆ ಸೇರಿಕೊಳ್ಳಲಿದ್ದು ರಜನಿಕಾಂತ್ ಹೆಸರಿನಲ್ಲಿ ಸಮಾಜ ಸೇವೆ ಮುಂದುವರಿಯಲಿದೆ ಎಂದು ರಜನಿಕಾಂತ್ ಹೇಳಿದ್ದಾರೆ.
ಪತ್ರದ ಮೂಲಕ ತಮ್ಮ ನಿರ್ಧಾರವನ್ನು ತಮಿಳುನಾಡು ಜನರಿಗೆ ತಲುಪಿಸುವ ಪ್ರಯತ್ನವನ್ನು ಕೂಡಾ ಅವರು ಮಾಡಿದ್ದಾರೆ.