ಹೋಟೆಲ್ ಗಳಲ್ಲಿ ಮಾಂಸಾಹಾರ ತಿಂದವರು ಒಂದೊಂದು ಡಿಮೆರಿಟ್ ಹೇಳ್ತಾರೆ. ಇನ್ನೂ ಹಳ್ಳಿ ಭಾಗದ ಜನನರಿಗೆ ಹೋಟೆಲ್, ಡಾಬಾಗಳಲ್ಲಿ ನಾನ್ ವೆಜ್ ಇಷ್ಟಾನೇ ಆಗಲ್ಲ. ಕಾರಣ ಇಲ್ಲಿ ಅಡುಗೆ ಸಪ್ಪೆ ಆಗಿರುತ್ತೆ ಅನ್ನೋದು. ಹಾಗಾಗಿ ಈ ವಾರ ಎಲ್ಲಿಯೂ ಹೊರಗಡೆ ಹೋಗದೇ ಮನೆಯಲ್ಲಿಯೇ ಬಾಯಲ್ಲಿ ನೀರು ತರಿಸುವ ಹಳ್ಳಿ ಶೈಲಿಯ ಸ್ಪೈಸಿ ಚಿಕನ್ ಡ್ರೈ ರೋಸ್ಟ್ ಮಾಡಿ.
ಬೇಕಾಗುವ ಸಾಮಾಗ್ರಿಗಳು
ಚಿಕನ್- 1/2 ಕೆಜಿ
ಈರುಳ್ಳಿ- 1 (ದೊಡ್ಡ ಗಾತ್ರದ್ದು)
ಅರಿಶಿಣ-1/2 ಟೀ ಸ್ಪೂನ್
ಖಾರದ ಪುಡಿ-1/2 ಟೀ ಸ್ಪೂನ್
ಗರಂ ಮಸಾಲ- 1/2 ಟೀ ಸ್ಪೂನ್
ಪೆಪ್ಪರ್- 1/4 ಟೀ ಸ್ಪೂನ್
ಜೀರಿಗೆ ಪೌಡರ್- 1/4 ಟೀ ಸ್ಪೂನ್
ಧನಿಯಾ ಪೌಡರ್-1/2 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಟೀ ಸ್ಪೂನ್
ಹಸಿ ಮೆಣಸಿನಕಾಯಿ-3
ಕರಿಬೇವು-5 ರಿಂದ 6 ಎಲೆ
ಎಣ್ಣೆ
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ
- ಮೊದಲಿಗೆ ಚಿಕನ್ ತೊಳೆದುಕೊಂಡು ಒಂದು ಬೌಲ್ ನಲ್ಲಿ ಹಾಕಿಕೊಳ್ಳಿ. ಇದಕ್ಕೆ ಅರಿಶಿಣ, ಖಾರದ ಪುಡಿ, ಗರಂ ಮಸಾಲ, ಪೆಪ್ಪರ್ ಪೌಡರ್, ಜೀರಿಗೆ ಪೌಡರ್, ಧನಿಯಾ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎರಡು ಟೇಬಲ್ ಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 30 ನಿಮಿಷ ಬಿಡಿ.
- ಈರುಳ್ಳಿಯನ್ನು ಕತ್ತರಿಸಿಕೊಂಡು ಕೆಂಪು ಬಣ್ಣ ಬರೋವರೆಗೂ ಫ್ರೈ ಮಾಡಿ, ಮಿಕ್ಸಿ ಜಾರ್‍ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಮತ್ತೊಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎರಡು ಸ್ಪೂನ್ ಎಣ್ಣೆ ಹಾಕಿಕೊಳ್ಳಿ (ನಿಮ್ಮ ಡಿಶ್ ರೆಡಿ ಆಗೋವರೆಗೂ ಸ್ಟೌವ್ ಸಣ್ಣ ಉರಿಯಲ್ಲಿರಬೇಕು). ಎಣ್ಣೆ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಪೇಸ್ಟ್ ಮತ್ತು ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
- ಈರುಳ್ಳಿ ಪೇಸ್ಟ್ ಫ್ರೈ ಆಗ್ತಿದ್ದಂತೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಚಿಟಿಕೆ ಅರಿಶಿಣ ಮತ್ತು ಅರ್ಧ ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡುತ್ತಿರಬೇಕು.