ವಾಷಿಂಗಟನ್: ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಬಳಿಕ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ ತೆರಳುತ್ತಿದ್ದಾರೆ.
ಇಂದು ನ್ಯೂಮೆಕ್ಸಿಕೋದಿಂದ ವರ್ಜಿನ್ ಗ್ಯಾಲಕ್ಟಿನ್ ಟು ಯುನಿಟಿ ಗಗನನೌಕೆಯಲ್ಲಿ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸುತ್ತಿರುವ 6 ಜನ ಯಾನಿಗಳಲ್ಲಿ ಸಿರಿಶಾ ಸಹ ಒಬ್ಬರಾಗಿದ್ದಾರೆ. 34 ವರ್ಷದ ಸಿರಿಶಾ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿ, ಉನ್ನತ ಶಿಕ್ಷಣವನ್ನು ಅಮೆರಿಕದ ಟೆಕ್ಸಾಸ್ ನ ಹೊಸ್ಟನ್ ನಲ್ಲಿ ಪಡೆದುಕೊಂಡಿದ್ದಾರೆ. ನಾಸಾದ ಅಂತರಿಕ್ಷ ಕೇಂದ್ರದ ಬಳಿಯ ನಗರದಲ್ಲಿ ವಾಸವಾಗಿದ್ದ ಸಿರಿಶಾ ಅವರಿಗೆ ಪೈಲಟ್ ಶಿಕ್ಷಣ ಪಡೆದು ನಾಸಾ ಸೇರಿಕೊಳ್ಳುವ ಆಸೆ ಹೊಂದಿದ್ದರು. ಆದ್ರೆ ಕಣ್ಣಿನ ದೃಷ್ಟಿಯ ಸಮಸ್ಯೆಯಿಂದ ಪೈಲಟ್ ಆಗುವ ಆಸೆ ಈಡೇರಲಿಲ್ಲ. ನಂತರ ಏರೋನಾಟಿಕಲ್ ಇಂಜಿನೀಯರ್ ಆಗಿ ನಾಸಾ ಸೇರಿಕೊಂಡರು.

`ವೆಲ್ತೀ ಡೇರ್ ಡೆವಿಲ್ ಮೊಘಲ್’ ಹೆಸರುವಾಸಿ ವರ್ಜಿನ್ ಕಂಪನಿಯ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಕನಸು ಸ್ಪೇಸ್ ಟೂರಿಸಂ ಕನಸು ಇಂದು ಸಾಕಾರಗೊಳ್ಳುತ್ತಿದೆ. ವರ್ಜಿನ್ ಗ್ಯಾಲಾಕ್ಟಿಕ್ ಹೋಲ್ಡಿಂಗ್ ಇಂಕ್ ಕಂಪನಿ ಇಂದು ಮೊದಲ ಪ್ರಯಾಣಿಕರ ವಿಎಸ್‍ಎಸ್ ಯುನಿಟಿನಿಟಿ ಹೆಸರಿನ ಗಗನ ನೌಕೆಯನ್ನು ಉಡಾವಣೆ ಮಾಡಲಿದೆ.

90 ನಿಮಿಷಗಳ ಈ ಮಹಾತ್ಸಾಧನೆಯಲ್ಲಿ ಎಲ್ಲವೂ ಸರಿಯಾದರೆ ನ್ಯೂ ಮೆಕ್ಸಿಕೋ ಮರಳುಗಾಡಿನ ಮೇಲೆ ಭೂಮಿಯ ಪರಿಧಿಯಿಂದ 50 ಮೈಲಿ ಎತ್ತರಕ್ಕೆ ಯುನಿಟಿ-22 ರಾಕೆಟ್ ಹಾರಲಿದೆ. ಇಬ್ಬರು ಪೈಲಟ್‍ಗಳು, ರಿಚರ್ಡ್ ಬ್ರಾನ್ಸನ್ ಸೇರಿ ನಾಲ್ವರು ತರಬೇತಿ ಹೊಂದಿರುವ ತಜ್ಞರು ಸ್ಪೇಸ್ ಸ್ಟೇಷನ್ ಅಂಚಿನಲ್ಲಿ ಕೆಲ ನಿಮಿಷ ರೋಚಕ ಅನುಭವ ಅನುಭವಿಸಲಿದ್ದಾರೆ.

ಜುಲೈ 11ರ ಅಂತರಿಕ್ಷ ಯಾನಕ್ಕೆ ತನ್ನನ್ನು ಆಯ್ಕೆ ಮಾಡಿರುವ ವಿಷಯ ತಿಳಿದಾಗ ತುಂಬಾನೇ ಖುಷಿ ಆಯ್ತು. ಬೇರೆ ಬೇರೆ ಜನರ ಜೊತೆ ಅಂತರಿಕ್ಷದಲ್ಲಿ ಸಮಯ ಕಳೆಯುವ ಆ ಅದ್ಭುತ ಕ್ಷಣಕ್ಕೆ ಕಾತುರಳಾಗಿದ್ದೇನೆ ಎಂದು ಸಿರಿಶಾ ಸಂತೋಷ ಹಂಚಿಕೊಂಡಿದ್ದಾರೆ.