ಬೆಂಗಳೂರು: ಕೊರೊನಾ ಮೂರನೇ ಆಲೆ ಆತಂಕದ ನಡುವೆ ಬೆಂಗಳೂರಿನ ಜನತೆ ಕೊಂಚ ನಿಟ್ಟುಸಿರು ಬಿಡುವಂತಹ ಗುಡ್ ನ್ಯೂಸ್ ಸಿಕ್ಕಿದೆ. ಅನ್‍ಲಾಕ್ ಆಗಿ ಎರಡೂ ವಾರದ ಕಳೆದ ಮೇಲೆ ರಾಜಧಾನಿಯಲ್ಲಿಂದು 5 ನೂರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿವೆ,

ಇಂದು ರಾಜ್ಯದಲ್ಲಿ 2,162 ಜನಕ್ಕೆ ಸೋಂಕು ತಗುಲಿದ್ದು, ಪಾಸಿಟಿವಿಟಿ ರೇಟ್ ಶೇ.1.48ಕ್ಕೆ ಇಳಿದಿದೆ, ಇನ್ನೂ ಬೆಂಗಳೂರಿನಲ್ಲಿ 452 ಜನರು ಸೋಂಕಿಗೆ ಒಳಗಾಗಿದ್ದು, 746 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Covid numbers in Karnataka today:
— Dr Sudhakar K (@mla_sudhakar) July 10, 2021
💠 New cases in Karnataka: 2,162
💠 New cases in Bengaluru: 452
💠 Positivity rate: 1.48%
💠 Today's Discharges: 2879 (Blore- 746)
💠 Today's Deaths:48 (Blore- 05)
💠 Active cases in State: 37,141
💠 Total tests today:1,45,666
ಇವತ್ತು 48 ಜನರನ್ನು (ಬೆಂಗಳೂರು-05) ಕೊರೊನಾ ಮಹಾಮಾರಿ ಬಲಿ ಪಡೆದುಕೊಂಡಿದೆ. ಸದ್ಯ ರಾಜ್ಯದಲ್ಲಿ 37,141 ಸಕ್ರಿಯ ಪ್ರಕರಣಗಳಿವೆ. ಇಂದು ರಾಜ್ಯದಲ್ಲಿ 1.45,666 ಸ್ಯಾಂಪಲ್ ಗಳನ್ನು ಕೊರೊನಾಪರೀಕ್ಷೆಗೆ ಒಳಪಡಿಸಲಾಗಿತ್ತು.