ಸಾಮಾನ್ಯವಾಗಿ ಪುರುಷರ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡಲ್ಲ. ಸದಾ ಮನೆಯಿಂದ ಹೊರಗೆ ಇರೋ ಪುರುಷರು ದಿನನಿತ್ಯದ ಜೀವನಶೈಲಿಯನ್ನ ಅಳವಡಿಸಿಕೊಂಡಲ್ಲಿ ನಿಮ್ಮ ಸ್ಕಿನ್ ಟೈಟ್ ಮತ್ತು ಬ್ರೈಟ್ ಆಗುತ್ತೆ. ಬ್ಯುಸಿ ಶೆಡ್ಯೂಲ್ ನಲ್ಲಿಯೂ ಈ ವಿಧಾನಗಳನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದು.
- ಮೊದಲು ನಿಮ್ಮ ತ್ವಚೆ (ಆಯಿಲಿ ಅಥವಾ ಡ್ರೈ) ಯಾವ ರೀತಿಯದ್ದು ಎಂದು ತಿಳಿದುಕೊಳ್ಳಿ, ನಂತರ ಅದಕ್ಕೆ ತಕ್ಕಂತಹ ಸೌಂದರ್ಯ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಉತ್ತಮ ರಿಸಲ್ಟ್ ನಿಮ್ಮದಾಗುತ್ತೆ. ತ್ವಚೆಗೆ ಅನುಗುಣವಾದ ಪ್ರೊಡಕ್ಟ್ ಬಳಕೆ ಮಾಡೋದರಿಂದ ಸೈಡ್ ಎಫೆಕ್ಟ್ ಸಮಸ್ಯೆ ಇರಲ್ಲ. ನಿಮ್ಮ ತ್ವಚೆಯ ಮತ್ತು ಉತ್ಪನ್ನಗಳ ಬಳಕೆಗೆ ಗೊಂದಲಗಳಿದ್ರೆ ಸೌಂದರ್ಯ ತಜ್ಞರು ಅಥವಾ ಚರ್ಮ ರೋಗ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡದುಕೊಳ್ಳಿ.
- ಸಿಟಿಎಂ ಅಭ್ಯಾಸ ಮಾಡಿಕೊಳ್ಳಿ: ಸಿಟಿಎಂ ಅಂದ್ರೆ ಕ್ಲೀಜಿಂಗ್, ಟೋನಿಂಗ್ ಮತ್ತು ಮೊಶ್ಚಾಯಿರಿಜಿಂಗ್. ದಿನಕ್ಕೆ ಎರಡು ಬಾರಿ ಸಿಟಿಎಂ ಮಾಡಿಕೊಳ್ಳುವ ಮೂಲಕ ಮುಖ ಸ್ವಚ್ಛಗೊಳಿಸಬೇಕು. ಟೋನಿಂಗ್ ವೇಳೆ ನಿಮ್ಮ ತ್ವಚೆಗೆ ಹೊಂದುವಂತಹ ಟೋನರ್ ಬಳಸಿ. ರೋಸ್ ವಾಟರ್ ಬಳಕೆ ಸರಳ ಮತ್ತು ಒಳ್ಳೆಯದು. ಇನ್ನೂ ನಿಮ್ಮದು ಆಯಿಲಿ ಸ್ಕಿನ್ ಆಗಿದ್ರೆ ಮೊಶ್ಚಾಯಿರಿಜಿಂಗ್ ಗೆ ಹೆಚ್ಚು ಸಮಯ ನೀಡಿ.
- ಸ್ಕ್ರಬಿಂಗ್ ನ್ನು ವಾರದಲ್ಲಿ ಒಂದೆರಡು ಬಾರಿ ಮಾಡುವದರಿಂದ ತ್ವಚೆ ಸಂವೇದನಾಶೀಲವಾಗಿರುತ್ತದೆ. ವಾತಾವರಣದಲ್ಲಿಯ ಧೂಳಿನ ಕಣಗಳು ಮುಖದ ಮೇಲೆ ಶೇಖರಣೆ ಆಗಿದ್ರೆ ಸ್ಕ್ರಬಿಂಗ್ ನಿಂದ ತೆಗೆಯಬಹುದಾಗಿದೆ.
- ಚಳಿಗಾಲದಲ್ಲಿ ಕೈ ಬಿರುಕು ಬಿಟ್ಟಾಗ ಲೋಶನ್ ಬಳಕೆ ಮಾಡುತ್ತಾರೆ. ಇನ್ನೂ ಕೆಲವರು ಬೇಸಿಗೆಯಲ್ಲಿ ಮಾತ್ರ ಸನ್ ಸ್ಕ್ರೀನ್ ಬಳಸುತ್ತಾರೆ. ಇಡೀ ವರ್ಷ ಲೋಷನ್ ಬಳಕೆ ಮಾಡುವದಿಂದ ತ್ವಚೆ ಆರೋಗ್ಯಕರವಾಗಿರುತ್ತದೆ.
ಇವೆಲ್ಲದರ ಜೊತೆ ಮುಖ ತೊಳೆದುಕೊಂಡ ಅದಕ್ಕೆ ಪ್ರತ್ಯೇಕ ಟವಲ್ ಬಳಕೆ ಮಾಡೋದು, ಮುಖಕ್ಕೆ ಪ್ರತ್ಯೇಕ ಸೋಪ್ ಬಳಸುವದರಿಂದ ತ್ವಚೆ ಕೋಮಲವಾಗಿರುತ್ತದೆ.