ಕೆಲವೊಮ್ಮೆ ರಾತ್ರಿ ಮಾಡಿದ ಅನ್ನ ಉಳಿದ್ರೆ ಅದಕ್ಕೆ ಒಗ್ಗರಣೆ ಮತ್ತು ಅರಿಶಿನ ಹಾಕಿ ಚಿತ್ರಾನ್ನ ಮಾಡೋದು ಕಾಮನ್. ಒಮ್ಮೊಮ್ಮೆ ಪ್ರತಿದಿನ ರಾತ್ರಿ ಅನ್ನ ಬೆಳಗ್ಗೆ ಚಿತ್ರಾನ್ನ ಬದಲಾದ್ರೆ ಮಕ್ಕಳ ಊಟಕ್ಕೆ ಚಕ್ಕರ್ ಹೇಳ್ತಾರೆ. ಹಾಗಾಗಿ ಉಳಿದ ಅನ್ನವನ್ನೇ ಬಳಸಿ ರುಚಿಕರವಾದ ಮತ್ತು ಘಮ ಘಮಿಸುವ ದೋಸೆ ಮಾಡುವ ಸರಳ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಅನ್ನ; 1 ಕಪ್
ಹಸಿ ಮೆಣಸಿನಕಾಯಿ-4
ಬೆಳ್ಳುಳ್ಳಿ- 6 ರಿಂದ 7 ಎಸಳು
ಕ್ಯಾರೆಟ್- 1
ಕೋತಂಬರಿ ಸೊಪ್ಪು
ಜೀರಿಗೆ- 1/2 ಚಮಚ
ಕಾರ್ನ್ ಫ್ಲೋರ್ – 1/2 ಚಮಚ
ಮೈದಾ ಹಿಟ್ಟು- 1/2 ಚಮಚ
ಗೋಧಿ ಹಿಟ್ಟು – 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ
- ಮಿಕ್ಸಿ ಜಾರಿಗೆ ಒಂದು ಕಪ್ ಅನ್ನ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ಒಂದು ಕಪ್ ನೀರಿನೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ.
- ರುಬ್ಬಿಕೊಂಡ ಮಿಶ್ರಣವನ್ನು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಂಡು, ಗೋಧಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಕತ್ತರಿಸಿದ ಕೋತಂಬರಿ, ಕ್ಯಾರೆಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಗ್ಯಾಸ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಟಿಕೊಳ್ಳಿ. ಪ್ಯಾನ್ ಬಿಸಿಯಾಗ್ತಿದ್ದಂತೆ ಪ್ಯಾನ್‍ಗೆ ಎಣ್ಣೆ ಅಥವಾ ತುಪ್ಪ ಸವರಿ ಮಿಶ್ರಣವನ್ನ ದೋಸೆ ರೀತಿಯಲ್ಲಿ ಹಾಕಿ, ಎರಡು ಕಡೆ ಬೇಯಿಸಿದ್ರೆ ರುಚಿಕರವಾದ ದೋಸೆ ರೆಡಿ