ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಗೊಂದಲಗಳು ಮುಂದುವರಿದಿದೆ. ರಾಜ್ಯಕ್ಕೆ ಉಸ್ತುವಾರಿ ಅರುಣ್ ಸಿಂಗ್ ಬಂದು ಹೋದ ಬಳಿಕವೂ ಕೆಲ ಶಾಸಕರು, ಸಚಿವರ ದೆಹಲಿ ಪರೇಡ್ ಮುಂದುವರಿದಿದೆ. ಇತ್ತೀಚೆಗಷ್ಟೇ ಸಚಿವ ಸಿ.ಪಿ ಯೋಗೇಶ್ವರ್ ದೆಹಲಿಗೆ ಹೋಗಿ ಬಂದಿದ್ದರು. ಇದರ ಬೆನ್ನಲೆ ಈಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುವ ಮುನ್ಸೂಚನೆ ಸಿಕ್ಕಿದೆ.
ಇಷ್ಟು ದಿನ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ದೂರು ನೀಡಲು ಶಾಸಕರು ಸಚಿವರು ದೆಹಲಿಗೆ ತೆರಳುತ್ತಿದ್ದರು ಆದರೆ ಈಗ ಬಿಎಸ್‌ವೈ ವಿರುದ್ಧ ದೂರು ನೀಡುತ್ತಿದ್ದ ಶಾಸಕರು ಮತ್ತು ಸಚಿವರ ವಿರುದ್ಧವೇ ದೂರು ನೀಡಲು ಕೆಲವು ಶಾಸಕರು ಮುಂದಾಗಿದ್ದಾರೆ.
ಎಂಪಿ ರೇಣುಕಾಚಾರ್ಯ ನೇತ್ರತ್ವದಲ್ಲಿ 15 ಮಂದಿ ಶಾಸಕರ ನಿಯೋಗ ಇನ್ನೆರಡು ವಾರದಲ್ಲಿ ದೆಹಲಿ ತೆರಳಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಭೇಟಿ ವೇಳೆ ಸಿಎಂ ವಿರುದ್ಧ ಬಹಿರಂಗ ಹೇಳಿಕೆ ಕೊಡುವ ಬಸವನಗೌಡ ಪಾಟೀಲ್ ಯತ್ನಾಳ್, ಸಚಿವ ಸಿ ಪಿಯೋಗೀಶ್ವರ್, ಎಂಎಲ್ ಸಿ ಹೆಚ್. ವಿಶ್ವನಾಥ್ ವಿರುದ್ಧ ಕ್ರಮಕ್ಕೂ ಒತ್ತಡ ಹೇರಲಿದ್ದಾರೆ ಎನ್ನಲಾಗಿದೆ.