ನವದೆಹಲಿ : ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದ ಅಣ್ಣಾಮಲೈಗೆ ಬಿಜೆಪಿ ಮಹತ್ವದ ಜವಬ್ದಾರಿ ವಹಿಸಿದ್ದು ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಿದೆ
ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅಧಿಕೃತ ಆದೇಶ ಹೊರಿಡಿಸಿದ್ದಾರೆ. ಈ ಹಿಂದೆ ರಾಜ್ಯಧ್ಯಕ್ಷರಾಗಿದ್ದ ಎಲ್.ಮುರುಗನ್ ಕೇಂದ್ರ ಸಚಿವರಾದ ಹಿನ್ನಲೆ ಅಣ್ಣಾಮಲೈಗೆ ರಾಜ್ಯಧ್ಯಕ್ಷರ ಸ್ಥಾನ ನೀಡಲಾಗಿದೆ.

ಮಾಜಿ ಐಪಿಎಸ್ ಅಧಿಕಾರಿ ಮತ್ತು ಯುವ ನಾಯಕ ಎನ್ನುವ ಕಾರಣಕ್ಕೆ ಅಣ್ಣಾಮಲೈಗೆ ಅವಕಾಶ ನೀಡಲಾಗಿದ್ದು ದ್ರಾವಿಡ ನೆಲದಲ್ಲಿ ಕಮಲ ಅರಳಿಸುವ ಜವಬ್ದಾರಿ ವಹಿಸಲಾಗಿದೆ.