ನವದೆಹಲಿ: ಕೇಂದ್ರ ಸಂಪುಟ ಸೇರುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ತಮ್ಮ ಟ್ವಿಟ್ಟರ್ ಖಾತೆಯ ಎಲ್ಲ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ.

ಹೋರಾಟದ ಮೂಲಕವೇ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಎರಡು ಬಾರಿ ಸಂಸದೆಯಾಗಿದ್ದಾರೆ. ಜೊತೆಗೆ ಆಕ್ರೋಶ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗಿದ್ದುಂಟು. ಇನ್ನು ಟ್ವಿಟ್ಟರ್ ನಲ್ಲಿ ಹಲವು ಫೇಕ್ ನ್ಯೂಸ್ ಗಳನ್ನು ಸಂಸದರು ಶೇರ್ ಮಾಡಿಕೊಂಡು ಟ್ರೋಲ್ ಆಗಿದ್ದುಂಟು. ಈಗ ಕೇಂದ್ರ ಸಚಿವೆಯಾದ ಹಿನ್ನೆಲೆಯಲ್ಲಿ ತಮ್ಮ ಎಲ್ಲ ಹಳೆಯ ಟ್ವೀಟ್ ಮೂಲಕ ಹೊಸ ಮುನ್ನಡಿ ಬರೆದಿದ್ದಾರೆ.
#CabinetExpansion2021 | Rajeev Chandrasekhar, Shobha Karandlaje and Bhanu Pratap Singh Verma take oath as ministers. pic.twitter.com/15nVfmdgbu
— ANI (@ANI) July 7, 2021
ಇಂದು ಕರ್ನಾಟಕದ ನಾಲ್ವರು ಸಂಸದರು ಕೇಂದ್ರ ಮಂತ್ರಿಗಳಾಗಿದ್ದಾರೆ. ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್ ಮತ್ತು ಎ.ನಾರಾಯಣಸ್ವಾಮಿ ಮೋದಿ ಟೀಂ ಸೇರಿಕೊಂಡಿದ್ದಾರೆ.