ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟಕ್ಕೆ ಸರ್ಜರಿ ಮಾಡಿದ್ದು, 12 ಜನಕ್ಕೆ ಕೊಕ್ ಕೊಟ್ಟಿದ್ದಾರೆ. ಇದರಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಅವರ ರಾಜೀನಾಮೆ ಸಹ ಒಂದಾಗಿದೆ. ಈ ವರ್ಷ ಕೋವಿಡ್-19 ನಿರ್ವಹಣೆಯಲ್ಲಿ ವಿಫಲರಾಗಿದ್ದೇಕೆ ಹರ್ಷವರ್ಧನ್ ಅವರ ರಾಜೀನಾಮೆ ಪಡೀತಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ರಾಜೀನಾಮೆ ಪಡೆಯುವ ಮೂಲಕ ಕರೋನಾ ತಡೆಗಟ್ಟುವಿಕೆ ಹಾಗೂ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ. ಅವರಷ್ಟೇ ಅಲ್ಲ, ಪ್ರತಿಯೊಬ್ಬರೂ ಅಸಮರ್ಥರೇ ತುಂಬಿದ್ದಾರೆ ಮೋದಿ ಸಂಪುಟದಲ್ಲಿ. ಎಲ್ಲಾ ವೈಫಲ್ಯಗಳ ಹೊಣೆ ಹೊರುವುದಾದರೆ ಸ್ವತಃ ಪ್ರಧಾನಿಯೇ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
15 Ministers inducted into the Union Cabinet including Jyotiraditya Scindia, Sarbananda Sonowal, Anurag Thakur, Kiren Rijiju, Hardeep Puri. pic.twitter.com/rO6WK02Vh2
— ANI (@ANI) July 7, 2021
ಕೋವಿಡ್ ವೈಫಲ್ಯಕ್ಕೆ ಹರ್ಷವರ್ಧನ್ ರಾಜೀನಾಮೆ ಪಡೆದಾಯ್ತು. ಆರ್ಥಿಕತೆ ಕಳಪೆಯಾಗಿದ್ದಕ್ಕೆ ವಿತ್ತ ಸಚಿವೆಯ ರಾಜೀನಾಮೆ ಯಾವಾಗ? ಪೆಟ್ರೋಲ್ ಬೆಲೆ ಏರಿಕೆ ತಡೆಯದ ಪೆಟ್ರೋಲಿಯಂ ಸಚಿವರ ರಾಜೀನಾಮೆ ಯಾವಾಗ? ರೈತರ ಬದುಕು ಮೂರಾಬಟ್ಟೆಯಾಗಿದೆ, ಕೃಷಿ ಸಚಿವರ ರಾಜೀನಾಮೆ ಯಾವಾಗ? ಗಡಿ ರಕ್ಷಣೆ ವೈಫಲ್ಯಕ್ಕೆ ರಕ್ಷಣಾ ಸಚಿವರ ರಾಜೀನಾಮೆ ಯಾವಾಗ ಎಂದು ಕಾಂಗ್ರೆಸ್ ಸಾಲು ಸಾಲು ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿದೆ.
ಕೋವಿಡ್ ವೈಫಲ್ಯಕ್ಕೆ ಹರ್ಷವರ್ಧನ್ ರಾಜೀನಾಮೆ ಪಡೆದಾಯ್ತು.
— Karnataka Congress (@INCKarnataka) July 7, 2021
ಆರ್ಥಿಕತೆ ಕಳಪೆಯಾಗಿದ್ದಕ್ಕೆ ವಿತ್ತ ಸಚಿವೆಯ ರಾಜೀನಾಮೆ ಯಾವಾಗ❓
ಪೆಟ್ರೋಲ್ ಬೆಲೆ ಏರಿಕೆ ತಡೆಯದ ಪೆಟ್ರೋಲಿಯಂ ಸಚಿವರ ರಾಜೀನಾಮೆ ಯಾವಾಗ❓
ರೈತರ ಬದುಕು ಮೂರಾಬಟ್ಟೆಯಾಗಿದೆ, ಕೃಷಿ ಸಚಿವರ ರಾಜೀನಾಮೆ ಯಾವಾಗ❓
ಗಡಿ ರಕ್ಷಣೆ ವೈಫಲ್ಯಕ್ಕೆ ರಕ್ಷಣಾ ಸಚಿವರ ರಾಜೀನಾಮೆ ಯಾವಾಗ❓
ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರದ ಮಂತ್ರಿಗಿರಿ ಸಿಕ್ಕಿರುವುದು ‘ಹೆಳವನಿಗೆ ಕುದುರೆ ನೀಡಿದಂತೆ’ ಎಂಬುದನ್ನ ಸದಾನಂದ ಗೌಡರನ್ನ ನೋಡಿಯೇ ಅಂದಾಜಿಸಬಹುದು. ನಾಲ್ವರಲ್ಲ, ಎಲ್ಲಾ 25 ಸಂಸದರು ಮಂತ್ರಿಗಳಾದರೂ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಎಸಗುವ ಅನ್ಯಾಯ ಸರಿಹೋಗದು. ರಾಜ್ಯದ ಪರ ಧ್ವನಿ ಎತ್ತುವ ಬೆನ್ನುಮೂಳೆ ಒಬ್ಬರಿಗೂ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.