ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಮಾತಿನ ಮೇಲೆ ಹಿಡಿತ ಇಲ್ವ, ಅವರಿಗೆ ಸಂಸ್ಕಾರ ಗೊತ್ತಿಲ್ವ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್‌ಎಸ್ ಡ್ಯಾಮ್‌ಗೆ ಅಡ್ಡಲಾಗಿ ಮಲಗಿಸುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿಗೆ ಯಾವ ಮಾತು ಅಡಬೇಕು, ಯಾವ ಮಾತು ಆಡಬಾರದು ಅನ್ನೋ ಜ್ಞಾನ ಇಲ್ವ? ಈ ರೀತಿಯ ಮಾತುಗಳನ್ನು ಒಪ್ಪಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ರೀತಿಯ ವೈಯಕ್ತಿಕ ಟೀಕೆಗಳು ನನ್ನ ಮೇಲೆ ಪರಿಣಾಮ ಬಿರೋದಿಲ್ಲ ಐ ಡೋಂಟ್ ಕೇರ್ ಎಂದಿರುವ ಅವರು, ನಾನು ಯಾವತ್ತು ಅಂತಹ ಲೆವೆಲ್ ಗೆ ಹೋಗಿ ಒಂದೇ ಒಂದು ಮಾತು ನಾನು ಹಾಗೆ ಮಾತಾಡಿಲ್ಲ ಎಂದು ಹೇಳಿದ್ದಾರೆ.
ಜನರೇ ಪಾಠ ಕಲಿಸುತ್ತಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ಚುನಾವಣೆಯಲ್ಲಿ ಜನ ಯಾರಿಗೆ ಪಾಠ ಕಲಿಸಿದ್ದಾರೆ ಅಂತ ನೆನಪಿದೆ ಅಂತ ತಿಳಿದುಕೊಳ್ತೀನಿ.ಯಾರಿಗೆ ಬುದ್ದಿ ಕಲಿಸಿದ್ದಾರೆ ಅಂತ ನಮ್ಮ ಮುಂದೆ ಸಾಕ್ಷಿ ಇದೆ. ಈ ರೀತಿ ಮಾತಿನಿಂದ ಜನರಿಗೆ ಎಷ್ಟು ನೋವಾಗಿದೆ ಅಂತ ಅವರು ಇನ್ನು ಅರ್ಥ ಮಾಡಿಕೊಂಡಿಲ್ಲ ಯಾಕೆ ಕುಮಾರಸ್ವಾಮಿ ಹಾಗೆ ಮಾಡ್ತಿದ್ದಾರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.