ಪತ್ನಿಯ ಚಿತೆ ಇನ್ನೂ ಆರಿರಲಿಲ್ಲ, ಪ್ರಾಣ ಬಿಟ್ಟ ಪತಿಷ
ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ಪುಣೆಯ ವಾರಾಣಾಸಿ ಕ್ಷೇತ್ರದ ಅಜಾದ್ ನಗರದಲ್ಲಿ ವಾಸವಾಗಿದ್ದರು.
ನಿಖಿಲ್ (28) ಮತಗ್ತು ಅಂಕಿತಾ (26) ಆತ್ಮಹತ್ಯೆಗೆ ಶರಣಾದ ದಂಪತಿ. ಅಜಾದ್ ನಗರದಲ್ಲಿ ವಾಸವಾಗಿದ್ದ ದಂಪತಿ ಬೇರೆ ಬೇರೆ ಕಡೆ ಪ್ರ್ಯಾಕ್ಟಿಸ್ ಮಾಡುತ್ತಿದ್ದರು, ಅಂಕಿತಾ ಗಲ್ಲಿ ನಂಬರ್ ಎರಡದಲ್ಲಿ, ನಿಖಿಲ್ ಬೇರೆ ಕಡೆ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ರಾತ್ರಿ ಮನೆಗೆ ಬರೋದನ್ನು ಮುನ್ನ ಇಬ್ಬರ ನಡುವೆ ಫೋನ್ ನಲ್ಲಿ ಗಲಾಟೆ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ:
ನಿಖಿಲ್ ರಾತ್ರಿ ಎಂಟು ಗಂಟೆಗೆ ಮನೆಗೆ ಬಂದಾಗ ಅಂಕಿತಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ನಿಖಿಲ್ ಪತ್ನಿಯ ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ, ವೈದ್ಯರು ಅಂಕಿತಾ ಮೃತರಾಗಿರೋದನ್ನು ದೃಢಪಡಿಸಿದ್ದಾರೆ, ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಅಂಕಿತಾ ಸೋದರ ಪಡೆದುಕೊಂಡಿದ್ದಾರೆ.
ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿದ್ದ ನಿಖಿಲ್ ಸಹ ಮನೆಗೆ ಬಂದು ಗುರುವಾರ ರಾತ್ರಿ ಏಲು ಗಂಟೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶೆರಣಾಗಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೊಸೆಯ ಅಂತ್ಯಕ್ರಿಯೆ ಮಾಡಿ ಬರೋಷ್ಟರಲ್ಲಿ ಮಗನ ಸಾವು ಕಂಡ ಪೋಷಕರು ಆಘಾತಕ್ಕೊಳಗಾಗಿ ಕಣ್ಣೀರು ಹಾಕುತ್ತಿದ್ದಾರೆ.