ಭೂಪಾಲ್ : ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ನಡುವೆ ಕಾಣಿಸಿಕೊಂಡಿರುವ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಹೊಸ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನಲೆ ಈ ನಡುವೆ ಜನರು ವ್ಯಾಕ್ಸಿನ್ ಪಡೆಯಲು ಮುಂದಾಗುತ್ತಿದ್ದಾರೆ.
ದಿನ ಕಳೆದಂತೆ ಜನರಲ್ಲಿ ವ್ಯಾಕ್ಸಿನ್ ಮೇಲಿನ ತಪ್ಪು ಕಲ್ಪನೆ ಮಾಯವಾಗುತ್ತಿದ್ದು ಬಹಳಷ್ಟು ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಇದರಿಂದ ದೇಶದಲ್ಲಿ ಲಸಿಕೆ ಕೊರತೆ ದೊಡ್ಡ ಪ್ರಮಾಣದಲ್ಲಿ ಎದುರಾಗಿದೆ.
#WATCH | Madhya Pradesh: A stampede-like situation seen at a #COVID19 vaccination centre in Chhindwara, Lodhikheda as people rush to get inoculated. (01.07.2021) pic.twitter.com/slK5nmbmlF
— ANI (@ANI) July 2, 2021
ಮಧ್ಯಪ್ರದೇಶದಲ್ಲಿ ವ್ಯಾಕ್ಸಿನ್ ಕೊರತೆ ಹಿನ್ನಲೆ ವ್ಯಾಕ್ಸಿನ್ ಪಡೆಯಲು ಜನರು ಪೈಪೋಟಿಗೆ ಬಿದ್ದಿದ್ದಾರೆ. ವ್ಯಾಕ್ಸಿನ್ ಪಡೆಯಲು ಜನರು ಪಡುತ್ತಿರುವ ಸಾಹಸವೊಂದು ಈಗ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಲೋಧಿಖೇದದ ಚಿಂದ್ವಾರದಲ್ಲಿರುವ ಕೊರೊನಾ ವ್ಯಾಕ್ಸಿನ್ ಸೆಂಟರ್‌ನಲ್ಲಿ ಜನರು ಲಸಿಕೆಗಾಗಿ ಮುಗಿಬಿದ್ದಿದ್ದಾರೆ. ವ್ಯಾಕ್ಸಿನೇಷನ್ ಸೆಂಟರ್ ತೆರೆಯುತ್ತಿದ್ದಂತೆ ಹೊರಗಡೆ ಕಾಯುತ್ತಿದ್ದ ದೊಡ್ಡ ಪ್ರಮಾಣದ ಜನರು ಒಳಗೆ ನುಸುಳಿ ಮೊದಲ ಸರದಿಯಲ್ಲಿ ನಿಲ್ಲಲ್ಲು ಪ್ರಯತ್ನಿಸಿದ್ದಾರೆ.
ಸೀಮಿತ ಪ್ರಮಾಣದ ಲಸಿಕೆ ಲಭ್ಯವಿರುವ ಹಿನ್ನಲೆ ಆರಂಭದಲ್ಲಿರುವ 50-100 ಜನರಿಗೆ ಲಸಿಕೆ ಲಭ್ಯವಾಗುತ್ತಿದೆ. ಬಾಕಿ ಜನರು ವ್ಯಾಕ್ಸಿನ್ ಗಾಗಿ ಮತ್ತೆ ಕಾಯುವ ಪರಿಸ್ಥಿತಿ ಬಂದಿದೆ. ಈ ಹಿನ್ನಲೆಯಲ್ಲಿ ಜನರು ವ್ಯಾಕ್ಸಿನ್ ಕೇಂದ್ರ ತೆರೆಯುತ್ತಿದ್ದಂತೆ ಮುಗಿಬಿದ್ದಿದ್ದಾರೆ ಎಂದು ವರದಿಯಾಗಿದೆ.