ಬೇರೆಯವರ ಮನೆಯಲ್ಲಿ ಕೆಲಸ ಮಾಡುವ ಮಹಿಳೆ
ಭೋಪಾಲ್: ಮಧ್ಯ ಪ್ರದೇಶದಲ್ಲಿರುವ ಬಡ ಮಹಿಳೆಗೆ ಬರೋಬ್ಬರಿ ಎರಡೂವರೆ ಲಕ್ಷದ ಬಿಲ್ ವಿದ್ಯುತ್ ಇಲಾಖೆ ನೀಡಿ ಶಾಕ್ ಕೊಟ್ಟಿದೆ.
ಗುನಾ ಗ್ರಾಮದಲ್ಲಿಯ ಪುಟ್ಟ ಮನೆಯಲ್ಲಿ ರಮಾಬಾಯಿ ಎಂಬ ವೃದ್ಧೆ ವಾಸವಾಗಿದ್ದಾರೆ. ಅದು ತುಂಬಾ ಹಳೆಯದಾದ ಮನೆ. ಇರೋದು ಒಂದು ಕೋಣೆ. ಅಲ್ಲಿ ಹಾಕಿರೋದು ಎರಡು ಲೈಟ್ ಮತ್ತು ಒಂದು ಫ್ಯಾನ್. ಇಷ್ಟು ಬಿಟ್ಟರೆ ರಮಾಬಾಯಿ ಅವರ ಮನೆಯಲ್ಲಿ ವಿದ್ಯುತ್ ಬಳಕೆಯೇ ಇಲ್ಲ, ಆದ್ರೆ ಅಲ್ಲಿಯ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ವೃದ್ಧೆಯ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಸ್ಥಳೀಯ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ.

ಇನ್ನೂ ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ವಿದ್ಯುತ್ ಇಲಾಖೆಯ ಅಧಿಕಾರಿ, ಅಷ್ಟು ದೊಡ್ಡ ಮೊತ್ತದ ಬಿಲ್ ಹೇಗೆ ಬಂತು ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ,