ಏನಿದು ಪ್ರೈವೇಟ್ ಪಾರ್ಟ್ ಫ್ರ್ಯಾಕ್ಚರ್? ವೈದ್ಯರು ಹೇಳೋದೇನು?
ಲಂಡನ್: ಸೆಕ್ಸ್ ವೇಳೆ ಯುವಕನೋರ್ವನ ಮರ್ಮಾಂಗ ಪ್ರ್ಯಾಕ್ಚರ್ ಆಗಿರುವ ವಿಚಿತ್ರ ಘಟನೆ ಬ್ರಿಟನ್ ನಲ್ಲಿ ವರದಿಯಾಗಿದೆ. ಬರೋಬ್ಬರಿ ಮೂರು ಸೆಂಟಿ ಮೀಟರ್ ನಷ್ಟು ಯುವಕನ ಮರ್ಮಾಂಗ ಪ್ರ್ಯಾಕ್ಚರ್ ಆಗಿದ್ದು, ಇದನ್ನ ವಿಶ್ವದಲ್ಲಿಯೇ ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
ಪುರುಷರ ಪ್ರೈವೇಟ್ ಪಾರ್ಟ್ ಯಾವುದೇ ಮೂಳೆಯನ್ನ ಹೊಂದಿರಲ್ಲ. ಹಾಗಾಗಿ ಫ್ರ್ಯಾಕ್ಚರ್ ಆಗುವ ಪ್ರಶ್ನೆಯೇ ಇರಲ್ಲ. ಆದ್ರೆ ಈ ಪ್ರಕರಣ ತುಂಬಾನೇ ವಿಚಿತ್ರವಾಗಿದೆ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಪ್ರೈವೇಟ್ ಪಾರ್ಟ್ ಹಾರಿಜಂಟನ್ ಆಗಿರುತ್ತದೆ. ಆದ್ರೆ ಇಲ್ಲಿ ವರ್ಟಿಕಲ್ ರೀತಿಯಲ್ಲಿ ಪ್ರೈವೇಟ್ ಪಾರ್ಟ್ ಫ್ರ್ಯಾಕ್ಚರ್ ಆಗಿದೆ.

ಗೊಂದಲದಲ್ಲಿಯೇ ವೈದ್ಯರು:
ಈ ಪ್ರಕರಣದಲ್ಲಿ ಟುನಿಕಾ ಅಲ್ಬುಜಿನಿಯಾ ಸಮಸ್ಯೆ ಕಂಡು ಬಂದಿದೆ. ಇರೆಕ್ಟಾಯಿಲ್ ಟಿಶ್ಯೂ ಬಳಿಯಲ್ಲಿಯೇ ಪ್ರೊಟೆಕ್ಟಿವ್ ಲೇಯರ್ ಇರುತ್ತದೆ. ಇದು ಆ ಭಾಗದಲ್ಲಿ ರಕ್ತ ತಲುಪಿಸುವ ಕೆಲಸ ಮಾಡುತ್ತೆ. ಆದ್ರೆ ಈ ಪ್ರಕರಣದಲ್ಲಿ ವೈದ್ಯರು ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಸದ್ಯ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರೈವೇಟ್ ಪಾರ್ಟ್ ಫ್ರ್ಯಾಕ್ಚರ್ ವೇಳೆ ಯುವಕ ಯಾವ ಪೊಜಿಶನ್ ನಲ್ಲಿ ಸೆಕ್ಸ್ ಮಾಡುತ್ತಿದ್ದ ಎಂಬುದರ ಬಗ್ಗೆ ವೈದ್ಯರಿಗೆ ಗೊತ್ತಾಗಿಲ್ಲ.

ನರ ತಜ್ಞರು ಹೇಳೋದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ನರ ತಜ್ಞರು, ಸೆಕ್ಸ್ ವೇಳೆಯೇ ಪ್ರೈವೇಟ್ ಪಾರ್ಟ್ ಶೇ.88 ಪ್ರಕರಣಗಳಲ್ಲಿ ಕಾಣುತ್ತೇವೆ. ಪ್ರೈವೇಟ್ ಫ್ರ್ಯಾಕ್ಚರ್ ಗೆ ಕೇವಲ ಒಂದು ಕಾರಣ ನೀಡಲು ಸಾಧ್ಯವಿಲ್ಲ. ಯುವಕರು ಹೆಚ್ಚು ಬಾರಿ ಹಸ್ತಮೈಥುನ ಮತ್ತು ಅತಿಯಾಗಿ ನಿದ್ದೆ ಮಾಡುವದರಿಂದಲೂ ಪ್ರೈವೇಟ್ ಪಾರ್ಟ್ ಫ್ರ್ಯಾಕ್ಚರ್ ಆಗುತ್ತೆ. ಆದ್ರೆ ಸೆಕ್ಸ್ ಪೊಜಿಶನ್ ವೇಳೆ ತೊಂದರೆ ಆದಾಗ ಪ್ರೈವೇಟ್ ಪಾರ್ಟ್ ಫ್ರ್ಯಾಕ್ಚರ್ ಆಗಲ್ಲ ಅಂತ ಹೇಳಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಅದು ಒಂದು ಕಾರಣ ಇರಬಹುದು ಎಂದು ಹೇಳುತ್ತಾರೆ.

ಅಧ್ಯಯನ ಅಗತ್ಯ ಅಂದ್ರು ಲೈಂಗಿಕ ತಜ್ಞರು:
ಹಾರಿಜಂಟಲ್ ಕ್ರ್ಯಾಕ್ ವೇಳೆ ಮುರಿದಿರುವ ಸದ್ದು ಬರುತ್ತೆ. ಆದ್ರೆ ಈ ಪ್ರಕರಣದಲ್ಲಿ ಆ ರೀತಿ ಯಾವುದೇ ಶಬ್ದ ಬಂದಿಲ್ಲ. ಇದೊಂದು ವಿಚಿತ್ರ ಮತ್ತು ವಿಶೇಷ ಪ್ರಕರಣವಾಗಿದ್ದು, ಆತನ ಮತ್ತು ಅವರ ಸಂಗಾತಿಯ ಸೆಕ್ಸ್ ಭಂಗಿಗಳ ಕುರಿತು ತಿಳಿದುಕೊಳ್ಳಬೇಕಿದೆ. ಈ ಬಗ್ಗೆ ಅಧ್ಯಯನ ಅಗತ್ಯ ಎಂದು ಮಧ್ಯ ಪೂರ್ವ ರಾಷ್ಟ್ರದ ಲೈಂಗಿಕ ತಜ್ಞರ ತಂಡ ಹೇಳಿದೆ.
ಮತ್ತೆ ಮೊದಲಿನಂತಾಗ್ತಾರಾ?
ಸಾಮಾನ್ಯವಾಗಿ 40 ವರ್ಷಕ್ಕಿಂತ ಹೆಚ್ಚಿನ ಪುರುಷರಲ್ಲಿ ಮರ್ಮಾಂಗ ಫ್ರ್ಯಾಕ್ಚರ್ ಕಂಡು ಬರುತ್ತದೆ. ಫ್ರ್ಯಾಕ್ಚರ್ ಬಳಿಕ ಮರ್ಮಾಂಗದಲ್ಲಿ ಒಂದು ಬಗೆಯ ಊತ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಾಣಿಸಿಕೊಂಡ ವ್ಯಕ್ತಿಗೆ ಸುಮಾರು 6 ತಿಂಗಳ ಚಿಕಿತ್ಸೆ ನೀಡಬೇಕಾಗುತ್ತೆ. ಆರು ತಿಂಗಳ ನಂತರವೇ ಆತ ಸಾಮಾನ್ಯ ಲೈಂಗಿಕ ಸ್ಥಿತಿಗೆ ಬರುತ್ತಾನೆ ಎಂದು ವೈದ್ಯರು ಹೇಳುತ್ತಾರೆ.

ಟೆಲಿಗ್ರಾಫ್ ರಿಪೋರ್ಟ್:
ಟೆಲಿಗ್ರಾಫ್ ರಿಪೋರ್ಟ್ ಪ್ರಕಾರ 1924ರಲ್ಲಿ ಮೊದಲ ಬಾರಿಗೆ ಪ್ರೈವೇಟ್ ಪಾರ್ಟ್ ಫ್ರ್ಯಾಕ್ಚರ್ ಪ್ರಕರಣ ಕಂಡು ಬಂತು. ಇಲ್ಲಿಯವರೆಗೆ ಈ ಮಾದರಿಯ 1,600 ಪ್ರಕರಣಗಳು ದಾಖಲಾಗಿವೆ. ಬಹುತೇಕ ಎಲ್ಲ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಶೇ.50ರಷ್ಟು ಕೇಸ್ ನಲ್ಲಿ ಫ್ಯಾಕ್ಚರ್ ಅಗುವಾಗ ಸೌಂಡ್ ಬಂದಿದೆ. ಚಿಕಿತ್ಸೆ ಬಳಿಕ ಐವರಲ್ಲಿ ನಾಲ್ಕು ಜನರು ಮತ್ತೆ ಸಾಮಾನ್ಯ ಲೈಂಗಿಕ ಸ್ಥಿತಿಗೆ ಬಂದಿದ್ದಾರೆ ಎಂದು ಸಂಶೋಧನಾ ವರದಿ ಹೇಳಿದೆ.