ನವದೆಹಲಿ : 12 ವರ್ಷ ಮೇಲ್ಪಟ್ಟವರಿಗಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್‌ಗೆ ತುರ್ತು ಬಳಕೆಗೆ ಅನುಮತಿ ನೀಡುವಂತೆ ಝೈಡಸ್ ಕ್ಯಾಡಿಲಾ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಮನವಿ ಮಾಡಿದೆ.
ವಿಶ್ವದಲ್ಲೆ ಮೊದಲ ಬಾರಿಗೆ ಪ್ಲಾಸ್ಮಾ ಡಿಎನ್ಎ ಆಧರಿತ ವ್ಯಾಕ್ಸಿನ್ ಸಿದ್ದಪಡಿಸಿರುವ ಝೈಡಸ್ ಕ್ಯಾಡಿಲಾ ಈಗಾಗಲೇ ಮೂರು ಹಂತಗಳ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದ್ದು ವರದಿಗಳನ್ನು ಡಿಸಿಜಿಐಗೆ ಸಲ್ಲಿಕೆ ಮಾಡಿದೆ.
Zydus Cadila applies for Emergency Use Authorisation (EUA) seeking approval from the Drugs Controller General of India (DCGI) for the launch of their DNA vaccine for 12 years & above. The vaccine has completed the third phase of trial.#COVID19 pic.twitter.com/LDlsSkG3zF
— ANI (@ANI) July 1, 2021
ಈ ವರದಿಗಳನ್ನು ಪರಿಶೀಲಿಸಿ ಅನುಮತಿ ನೀಡುವಂತೆ ಝೈಡಸ್ ಕ್ಯಾಡಿಲಾ ಡಿಸಿಜಿಐಗೆ ಮನವಿ ಮಾಡಿದ್ದು, ಈ ಮನವಿಯನ್ನು ಶೀಘ್ರದಲ್ಲಿ ಡಿಸಿಜಿಐ ತನ್ನ ತಜ್ಞರ ಸಮಿತಿಯ ಮೂಲಕ ಪರಿಶೀಲನೆ ನಡೆಸಿ ಅನುಮತಿ ನೀಡುವ ಬಗ್ಗೆ ತಿರ್ಮಾನ ಕೈಗೊಳ್ಳಲಿದೆ.
ಝೈಡಸ್ ಕ್ಯಾಡಿಲಾ ವರ್ಷಕ್ಕೆ 12 ಕೋಟಿ ವ್ಯಾಕ್ಸಿನ್ ಡೋಸ್ ಉತ್ಪಾದಿಸುವ ಗುರಿ ಹೊಂದಿದ್ದು, ಇದಕ್ಕೆ ಅನುನತಿ ಸಿಕ್ಕಲ್ಲಿ ಭಾರತದಲ್ಲಿ ನಾಲ್ಕನೆ ವ್ಯಾಕ್ಸಿನ್ ಬಳಕೆಗೆ ಮುಕ್ತವಾದಂತಾಗಲಿದೆ. ಅಮೇರಿಕಾದ ಮಾರ್ಡೆನಾ ಲಸಿಕೆಗೆ ಈಗಾಗಲೇ ಭಾರತದಲ್ಲಿ ಬಳಕೆಗೆ ಅನುನತಿ ಸಿಕ್ಕಿದ್ದು ಅದು ಆಮದಾಗಬೇಕಿದೆ.