ನವದೆಹಲಿ : 2-17 ವರ್ಷದ ಮಕ್ಕಳ ಮೇಲೆ ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗಕ್ಕೆ ಸರ್ಕಾರದ ತಜ್ಞರ ಸಮಿತಿ ವಿರೋಧ ವ್ಯಕ್ತಪಡಿಸಿದೆ. 2-3 ಹಂತದ ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ನೀಡದಂತೆ ಡಿಸಿಜಿಐಗೆ ಅದು ಮನವಿ ಮಾಡಿದೆ.
ಅಮೇರಿಕಾ ಮೂಲದ ಕೋವೊವ್ಯಾಕ್ಸ್ ಲಸಿಕೆಯನ್ನು ಭಾರತದಲ್ಲಿ ಪ್ರಯೋಗ ನಡೆಸಲು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅನುಮತಿ ಕೋರಿತ್ತು. ಭಾರತದ ಹತ್ತು ಪ್ರದೇಶಗಳಲ್ಲಿ 460 ಮಕ್ಕಳ ಮೇಲೆ ಪ್ರಯೋಗ ನಡೆಸುವುದಾಗಿ ಹೇಳಿತ್ತು.
The government panel has asked Serum Institute of India to complete trials of Covavax #COVID19 vaccine on adults first: Sources
— ANI (@ANI) July 1, 2021
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮನವಿಯನ್ನು ಪರಿಶೀಲಿಸಿದ ಸಿಡಿಎಸ್‌ಸಿಓ ಸಮಿತಿ ಅನುಮತಿ ನೀಡಲು ನಿರಾಕರಿಸಿದೆ. ಈವರೆಗೂ ಯಾವುದೇ ದೇಶಗಳಲ್ಲಿ ಕೋವೊವ್ಯಾಕ್ಸ್ ಲಸಿಕೆ ಮಕ್ಕಳ ಮೇಲೆ ಪ್ರಯೋಗಕ್ಕೆ ಅನುಮತಿ ನೀಡಿಲ್ಲ ಹೀಗಾಗಿ ಭಾರತದಲ್ಲೂ ನೀಡಲು ಸಾಧ್ಯವಿಲ್ಲ, ಮೊದಲು ಭಾರತದಲ್ಲಿ ವಯಸ್ಕರ ಮೇಲೆ ಪ್ರಯೋಗ ನಡೆಸಲು ಸೂಚಿಸುವಂತೆ ಡಿಸಿಜಿಐಗೆ ಸಮಿತಿ ಶಿಫಾರಸ್ಸು ಮಾಡಿದೆ.
ಸಿಡಿಎಸ್‌ಸಿಓ ಸಮಿತಿಯ ಈ ಶಿಫಾರಸ್ಸಿನಿಂದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ತಾತ್ಕಾಲಿಕ ಹಿನ್ನಡೆಯಾದಂತಾಗಿದೆ. ಈಗಾಗಲೇ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೆರಮ್ ಮಕ್ಕಳ ವ್ಯಾಕ್ಸಿನ್ ಮೇಲೆ ಆಸಕ್ತಿ ತೋರಿತ್ತು.