ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಚಿಕ್ಕಮಗಳೂರಿನ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ.
22 ವರ್ಷದ ಸಿಮ್ರನ್ ಮೃತ ಯುವತಿ. ಮೂರು ತಿಂಗಳ ಹಿಂದೆ ಫೆರೋಜ್ ಜೊತೆ ಸಿಮ್ರನ್ ಮದುವೆಯಾಗಿತ್ತು. ಆದ್ರೆ ಫೈರೋಜ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ರಮ ಸಂಬಂಧವನ್ನ ಸಿಮ್ರನ್ ಪ್ರಶ್ನೆ ಮಾಡಿದ್ದಳು ಎಂದು ವರದಿಯಾಗಿದೆ.
ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದ ಮಗಳನ್ನ ಆಕೆಯ ಪತಿ ಫೈರೋಜ್ ನೀರಿನ ಸಂಪ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ಸಿಮ್ರನ್ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಸಿಮ್ರನ್ ಪತಿ ಫೈರೋಜ್ ಮತ್ತು ಅತ್ತೆ ಹಾಗೂ ಮಾವನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ಸಿಮ್ರನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.