ನವದೆಹಲಿ : ಕನ್ನಡಿಗ ಕೆ.ಎಲ್ ರಾಹುಲ್ ಸೇರಿದಂತೆ ಜಸ್ಪ್ರಿತ್ ಬುಮ್ರಾ, ಶಿಖರ್ ಧವನ್ ಗೆ ಅರ್ಜುನ ಅವಾರ್ಡ್ ನೀಡುವಂತೆ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರ ಜೊತೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಮಿಥಾಲಿ ರಾಜ್ ಮತ್ತು ಆರ್. ಅಶ್ವಿನ್ ಅವರ ಹೆಸರನ್ನು ಪರಿಗಣಿಸಬಹುದು ಎಂದು ಬಿಸಿಸಿಐ ಹೇಳಿದೆ.
ಸುದ್ದಿಸಂಸ್ಥೆ ಎಎನ್‌ಐ ಗೆ ಮಾಹಿತಿ ನೀಡಿರುವ ಬಿಸಿಸಿಐ, ಸಮಿತಿಯಲ್ಲಿ ನಡೆದ ವಿಸ್ತೃತ ಚರ್ಚೆಗಳ ಬಳಿಕ ಈ ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಹೇಳಿದೆ.
ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬೇಕಾದ ದಿನಾಂಕವನ್ನು ಮುಂದೂಡಿದೆ. ಈ ಮೊದಲ ಜೂನ್ 21 ಕಡೆಯ ದಿನಾಂಕ ಎನ್ನಲಾಗಿತ್ತು. ಕೊರೊನಾ ಕಾರಣಗಳಿಂದ ದಿನಾಂಕ ಮುಂದೂಡಿ ಆದೇಶ ಹೊರಡಿಸಿದೆ.