ಬೆಂಗಳೂರು : ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
.@BSYBJP had recently announced ₹1 lakh as ex-gratia limiting to only one victim in a family. This is against the provisions of National calamity relief norms.
— Siddaramaiah (@siddaramaiah) June 30, 2021
I urge @CMofKarnataka to extend it to ₹5 lakh each for all the victims in a family.
ಕೊರೊನಾ ಸೋಂಕಿತರ ಕುಟುಂಬಗಳಿಗೆ ಪರಿಹಾರ ನೀಡುವ ಸುಪ್ರೀಂಕೋರ್ಟ್ ಆದೇಶದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದು ಲಕ್ಷದಿಂದ ಐದು ಲಕ್ಷಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.
In a relief to the families of #Covid19 victims, Hon. Supreme Court has directed NDMA to frame guidelines within 6 weeks to decide ex-gratia amount.
— Siddaramaiah (@siddaramaiah) June 30, 2021
SC has opined that families of victims are entitled to ex-gratia which was also our long standing demand.https://t.co/AJxcmUiLd6
ಸುಪ್ರೀಂಕೋರ್ಟ್ ನೀಡಿರುವ ಆದೇಶ ನಮ್ಮ ಬಹು ದಿನಗಳ ಬೇಡಿಕೆ. ಕೊರೊನಾಗೆ ಬಲಿಯಾದ ಕುಟುಂಬ ಪರಿಹಾರಕ್ಕೆ ಅರ್ಹವಾಗಿದ್ದು ಹೆಚ್ಚಿನ ಪ್ರಮಾಣದ ಪರಿಹಾರ ನೀಡುವಂತೆ ಅವರು ಕೋರಿದ್ದಾರೆ.