ಹಣ ಉಳಿಯುತ್ತೆ ಅಲ್ವಾ ಅಂದ್ರು ಸಚಿವರು
ಭೋಪಾಲ್: ದೇಶದಲ್ಲಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗ್ತಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಮಧ್ಯಪ್ರದೇಶದ ಇಂಧನ ಸಚಿವ ಪ್ರಧ್ಯುಮಾನ್ ಸಿಂಗ್ ತೋಮರ್ ಬೇಜಾವಾಬ್ದಾರಿ ಹೇಳಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಕೆಲ ತಿಂಗಳಿನಿಂದ ತೈಲ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಆದ್ದರಿಂದ ಸೈಕಲ್ ಚಲಾಯಿಸೋದು ಉತ್ತಮ. ತೈಲ ಬೆಲೆ ಏರಿಕೆಯನ್ನ ಒಪ್ಪಿಕೊಂಡ ಸಚಿವರು, ಹಣ ಉಳಿತಾಯಕ್ಕೆ ಸೈಕಲ್ ಉತ್ತಮ ಉಪಾಯ. ಹಣದ ಜೊತೆಗೆ ಆರೋಗ್ಯವೂ ನಿಮ್ಮದಾಗುತ್ತೆ ಅಂತ ಪುಕ್ಕಟೆ ಸಲಹೆ ನೀಡಿದ್ದಾರೆ.
ಈ ಹಿಂದೆ ಕಮಲ್‍ನಾಥ್ ಸರ್ಕಾರ ಇದ್ದಾಗ ಮತ್ತು ಸದ್ಯದ ಸಿಎಂ ಶಿವರಾಜ್ ಸಿಂಗ್ ಚೌಹಾಣ್‍ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮೂರು ತಿಂಗಳ ವಿದ್ಯುತ್ ಬಿಲ್‍ಗೆ ವಿನಾಯ್ತಿನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.