ನವದೆಹಲಿ : ಕಳೆದ ಒಂದೂವರೆ ವರ್ಷದಿಂದ ಕೊರೊನಾ ವೈರಸ್ ಬಿಟ್ಟುಬಿಡದೇ ಕಾಡುತ್ತಿದೆ. ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಶಾಲಾ ಕಾಲೇಜುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಎರಡನೇ ಅಲೆಯ ಬಳಿಕ ಶಾಲಾ ಕಾಲೇಜುಗಳನ್ನು ಆರಂಭಿಸಬೇಕು ಅಂತಾ ಚಿಂತನೆ ನಡೆಸುತ್ತಿದ್ದರೂ ಮೂರನೇ ಅಲೆಯ ಭೀತಿ ಹಿನ್ನಲೆ ಅದು ಸಾಧ್ಯವಾಗುತ್ತಿಲ್ಲ.
ಆಫ್‌ಲೈನ್ ಕ್ಲಾಸ್‌ಗಳು ಬಂದ್ ಆಗಿರುವ ಹಿನ್ನಲೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ಕೆಲವು ಶಾಲೆ ಕಾಲೇಜುಗಳು ಆನ್ಲೈನ್ ಕ್ಲಾಸ್‌ಗಳನ್ನು ನಡೆಸುತ್ತಿವೆ. ಹೀಗೆ ನಡೆಯುತ್ತಿರುವ ಆನ್ಲೈನ್ ಕ್ಲಾಸ್‌ಗೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಬೆಳಕಿಗೆ ಬಂದಿದ್ದು, ಸೂಕ್ತ ಸಾಧನಗಳಿಲ್ಲದ ಕಾರಣ ಕಳೆದೊಂದು ವರ್ಷದಿಂದ ಲಕ್ಷ ಲಕ್ಷ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರಂತೆ.
ಕೊರೊನಾ ಅವಧಿಯಲ್ಲಿ ಆನ್ಲೈನ್ ಕ್ಲಾಸ್‌ಗಳನ್ನು ನಡೆಸಲಾಗುತ್ತಿದ್ದು, ತರಗತಿ ಹಾಜರಾಗಲು ಮೂಬೈಲ್ ಇಲ್ಲದ ಕಾರಣ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದು ಬಿಹಾರ ಇದರಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.
ಕೇಂದ್ರ ಶಿಕ್ಷಣ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಯೊಂದಿಗೆ ಹಂಚಿಕೊಂಡ ಮಾಹಿತಿಯ ಪ್ರಕಾರ
ಬಿಹಾರದಲ್ಲಿ 1.4 ಕೋಟಿ ಮಕ್ಕಳ ಬಳಿ ಆನ್ಲೈನ್ ತರಗತಿ ಸೇರಲು ಎಲೆಕ್ಟ್ರಾನಿಕ್ ಡಿವೈಸ್‌ಗಳಿಲ್ಲದೇ ಶಿಕ್ಷಣದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 70% ಮಕ್ಕಳ ಬಳಿ ಆನ್ಲೈನ್ ತರಗತಿಗಳಿಗೆ ಸೇರಲು ಸಾಧನಗಳಿಲ್ಲ, ಮಹಾರಾಷ್ಟ್ರದಲ್ಲಿ 69%, ಗುಜರಾತ್‌ನಲ್ಲಿ 40%, ಛತ್ತೀಸ್ಗಢದಲ್ಲಿ 28.2% ರಷ್ಟು ಮಕ್ಕಳು ಆನ್ಲೈನ್ ಶಿಕ್ಷಣದಿಂದ ದೂರ ಉಳಿದಿದ್ದಾರೆ.
ಅಸ್ಸಾಂನಲ್ಲಿ 31, ಜಾರ್ಖಂಡ್ 32.5 ಮತ್ತು ಕರ್ನಾಟಕದಲ್ಲಿ 31.3, ಉತ್ತರ ಪ್ರದೇಶದ 5.5, ಹರಿಯಾಣದಲ್ಲಿ 10, ಉತ್ತರಾಖಂಡನಲ್ಲಿ 2.1 ಲಕ್ಷ ಮಕ್ಕಳ ಬಳಿ ಆನ್ಲೈನ್ ತರಗತಿ ಕೂರಲು ಸೂಕ್ತ ಸಾಧನಗಳಿಲ್ಲದೆ ಶಿಕ್ಷಣದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ.
ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಗೋವಾ ಮತ್ತು ಹೆಚ್ಚಿನ ಈಶಾನ್ಯ ರಾಜ್ಯಗಳಿಂದ ಇನ್ನೂ ಮಾಹಿತಿ ಬಂದಿಲ್ಲ ಎನ್ನಲಾಗಿದ್ದು, ಕೇರಳದ ವಯನಾಡ್ 100%, ಆಂಧ್ರಪ್ರದೇಶದ ಕಡಪಾದಲ್ಲಿ 99% ರಷ್ಟು ಮಕ್ಕಳು ಆನ್ಲೈನ್ ಕ್ಲಾಸ್‌ಗಳನ್ನು ಕೇಳುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.