ಬೆಂಗಳೂರು : ನಗರದಲ್ಲಿ ಬೆಳಂ ಬೆಳಗ್ಗೆಯೇ ಮಾಜಿ ಕಾರ್ಪೊರೇಟರ್ ಹತ್ಯೆಯಾಗಿದೆ. ಛಲವಾದಿ ಪಾಳ್ಯದ ಮಾಜಿ ಕಾರ್ಪೊರೇಟರ ಆಗಿದ್ದ ರೇಖಾ ಕದಿರೇಶ್‌ರನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಇಂದು ಬೆಳಗ್ಗೆ ಛಲವಾದಿ ಪಾಳ್ಯದಲ್ಲಿರು ರೇಖಾ ಕದಿರೇಶ್ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಹತ್ಯೆಯ ಹಿಂದೆ ಗಾಂಜಾ ನಂಟು ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸ್ಪೀಪನ್, ರಾಬರ್ಟ್, ಪೀಟರ್ ಎಂದು ಗುರುತಿಸಲಾಗಿದೆ. ಮೃತ ರೇಖಾ ಕದಿರೇಶ್ ಮತ್ತು ಪೀಟರ್ ನಡುವೆ ರಾಜಕೀಯ ವೈಷಮ್ಯ, ಹಣಕಾಸಿ ವ್ಯವಹಾರಗಳಿತ್ತು ಎನ್ನಲಾಗಿದ್ದಯ ಇತ್ತಿಚೆಗೆ ಗಾಂಜಾ ಮಾರಾಟದ ವಿಚಾರವಾಗಿ ಜಗಳ ನಡೆದಿತ್ತು.
ಛಲವಾಧಿ ಪಾಳ್ಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ದೂರು ರೇಖಾ ಕದಿರೇಶ್ ದೂರು ನೀಡಿದರಂತೆ ಈ ಹಿನ್ನಲೆ ಪೀಟರ್, ರೇಖಾಳ ಬಾಡಿಗಾರ್ಡ್ ಮತ್ತು ಲೋಕಲ್ ರೌಡಿ ಜೊತೆಗೂಡಿ ಇಂದು ಬೆಳಗ್ಗೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮೂರು ವರ್ಷದ ಹಿಂದೆ ರೇಖಾ ಕದಿರೇಶ್ ಪತಿ ಕದಿರೇಶ್‌ರನ್ನು ಹತ್ಯೆ ಮಾಡಲಾಗಿತ್ತು. ಈ ಕೊಲೆ ಬೆಂಗಳೂರಿನಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲೆ ರೇಖಾ ಕದಿರೇಶ್ ಕೊಲೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.