ಚಂಡೀಗಢ: ಗುಜರಿ ಅಂಗಡಿಯೋರ್ವ ಆರು ಹೆಲಿಕಾಪ್ಟರ್ ತಂದಿರುವ ಘಟನೆ ಪಂಜಾಬ್ ರಾಜ್ಯದ ಮಾನಸಾದಲ್ಲಿ ನಡೆದಿದೆ. ಗ್ರಾಮಕ್ಕೆ ಬಂದ ಹೆಲಿಕಾಪ್ಟರ್ ನೋಡಲು ಇಡೀ ಗ್ರಾಮಸ್ಥರೇ ಸೇರಿದ್ದರು.

ಇದರಲ್ಲಿ ಒಂದನ್ನು ಮುಂಬೈನ ವ್ಯಕ್ತಿ ಮತ್ತು ಎರಡನ್ನು ಲೂಧಿಯಾನಾದ ಹೋಟೆಲ್ ಮಾಲೀಕ ಖರೀದಿಸಿದ್ದಾರೆ. ಇನ್ನುಳಿದ ಕಾಪ್ಟರ್ ಗಳನ್ನು ಮಾನಸಾ ಗ್ರಾಮದಲ್ಲಿ ನಿಲ್ಲಿಸಲಾಗಿದೆ. ಒಂದೊಂದು ಹೆಲಿಕಾಪ್ಟರ್ ತೂಕ ಬರೋಬ್ಬರಿ 10 ಟನ್ ಹೊಂದಿವೆ.

ಗುಜರಿ ಸಾಮಾನುಗಳನ್ನು ಖರೀದಿಸುವ ಮಿಟ್ಟೂ ಕಬಾಡಿಯಾ ಸುತ್ತಮುತ್ತಲೂ ಫೇಮಸ್. ಮಿಟ್ಟೂ ಗುಜರಿಯ ಮೂರು ಹೆಲಿಕಾಪ್ಟರ್ ಖರೀದಿಸುವ ವಿಷಯ ಅಕ್ಕ ಪಕ್ಕದ ಊರುಗಳಿಗೆ ಹಬ್ಬಿದೆ. ಪಕ್ಕದೂರಿನಿಂದ ಬರುತ್ತಿರುವ ಜನರು ಹೆಲಿಕಾಪ್ಟರ್ ಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.