ಬೆಂಗಳೂರು: ಹೈಕೋರ್ಟಿನ ಜನಪ್ರತಿನಿಧಿಗಳ ವಿಶೇಷ ಪೀಠದಿಂದ, ಸಂತ್ರಸ್ತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ ದೂರಿನ ರದ್ದತಿ ಕೋರಿ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಯಿತು. SIT ಪರ ವಕೀಲರು ಹಾಜರಾಗಿ, ಸದ್ಯದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿಯ ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡಲು ಕೋರಿದರು.
ಸಂತ್ರಸ್ತೆ ಪರ ವಕೀಲರಾದ ಸಂಕೇತ ಏಣಗಿ SIT ಪರ ವಕೀಲರ ವರ್ಗಾವಣೆಯ ಕೋರಿಕೆಗೆ ಆಕ್ಷೇಪಿಸಿದರು. ಪ್ರಸ್ತುತ ಪ್ರಕರಣ ವಿಶೇಷ ಪ್ರಕರಣವಾಗಿದ್ದು, ಸದ್ಯದ ಜನಪ್ರತಿನಿಧಿಗಳ ವಿಶೇಷ ಪೀಠಕ್ಕೆ ವರ್ಗಾವಣೆಯಾಗಿದ್ದು, ಮರು ವರ್ಗಾವಣೆಯ ಅವಶ್ಯಕತೆ ಇಲ್ಲವೆಂದು ವಾದ ಮಂಡಿಸಿದರು.
ರಮೇಶ್ ಜಾರಕಿಹೊಳಿ ಪರ ವಕೀಲರು ಹಾಜರಾಗಿ ತಮ್ಮ ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.
ಉಭಯ ಪಕ್ಷದ ವಾದ ಆಲಿಸಿದ ನ್ಯಾಯಾಲಯ, SIT ಗೆ ಹಾಗೂ ರಮೇಶ್ ಜಾರಕಿಹೊಳಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಕೊನೆಯ ಕಾಲಾವಕಾಶ ನೀಡಿ, ವಿಚಾರಣೆಗೆ ಮುಂದಿನ ದಿನಾಂಕ ಜುಲೈ 6 ಕ್ಕೆ ನಿಗದಿಪಡಿಸಿದೆ.