- ಸಾವಿಗೂ ಮುನ್ನ ಫೋನ್ ಒಡೆದಿದ್ಯಾಕೆ ಯುವತಿ?
ಕೋಲಾರ: 23 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿಯಲ್ಲಿ ನಡೆದಿದೆ.
ಕಾವ್ಯಾಂಜಲಿ ಮೃತ ಯುವತಿ. ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕಾವ್ಯಾಂಜಲಿ ಎಂದಿನAತೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದಾಳೆ. ಹಸಿವು ಆಗ್ತಿದೆ ತಿನ್ನೋದಕ್ಕೆ ಏನಾದ್ರೂ ತರುವಂತೆ ತಾಯಿಯನ್ನ ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ಬಜ್ಜಿ- ಬೋಂಡಾ ತರೋದಾಗಿ ಹೇಳಿ ತಾಯಿ ಮನೆಯಿಂದ ಹೊರ ಹೋಗಿದ್ದಾರೆ. ಅಮ್ಮ ಹೊರ ಹೋಗುತ್ತಿದ್ದಂತೆ ಫೋನ್ ಒಡೆದು ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಜ್ಜಿ-ಬೋಂಡಾ ಕಟ್ಟಿಸಿಕೊಂಡ ಬಂದ ತಾಯಿಗೆ ಮಗಳ ಶವಕಂಡು ಆಘಾತಕ್ಕೊಳಗಾಗಿದ್ದಾರೆ. ಎರಡು ವರ್ಷದ ಹಿಂದೆ ಪಿಡಿಓ ಆಗಿದ್ದ ಕಾವ್ಯಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನುಕಂಪದ ಆಧಾರದ ಮೇಲೆ ಕಾವ್ಯಾಗೆ ಈ ಕೆಲಸ ಸಿಕ್ಕಿತ್ತು. ಕೆಲ ದಿನಗಳ ಹಿಂದೆ ಕಾವ್ಯಾಂಜಲಿ ಅಕ್ಕ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಹಬ್ಬಕ್ಕೆ ಬಾ ಅಂತಿದ್ಳು – ಮನೆಗೆ ಬಂದ್ರೆ ಪತಿಯಿಂದ ಬಟ್ಟೆ ಬಿಚ್ಚಸ್ತಿದ್ಲು!
ಆದಾದ ನಂತರ ಕಾವ್ಯಾ ಮತ್ತು ತಾಯಿ ಇಬ್ಬರೇ ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ನಡೆಸುತ್ತಿದ್ರು. ಇದೀಗ ಕಾವ್ಯಾಂಜಲಿ ಆತ್ಮಹತ್ಯೆ ಮಾಡಿಕೊಂಡು ಅಮ್ಮನನ್ನು ಒಂಟಿ ಮಾಡಿ ಹೋಗಿದ್ದಾಳೆ. ಆದ್ರೆ ಕಾವ್ಯಾಂಜಲಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಡೆದು ಹಾಕಿದ್ದ ಕಾವ್ಯಾಂಜಲಿಯ ಫೋನ್ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಗಂಡನ ತಪ್ಪಿಲ್ಲ, ಏನೂ ಮಾಡಬೇಡಿ- ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ಯಾಕೆ ಗೃಹಿಣಿ?