ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಮದುವೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ . ಯಾಮಿ ಜೂನ್ 4ರಂದು ನಿರ್ದೇಶಕ ಆದಿತ್ಯ ಧಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

2019ರ ಬ್ಲಾಕ್‌ಬಸ್ಟರ್ ಚಲನಚಿತ್ರ “ಉರಿ: ದಿ ಸರ್ಜಿಕಲ್ ಸ್ಟ್ರೈಕ್ಸ್” ನಲ್ಲಿಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾಕ್ಕಾಗಿ ಆದಿತ್ಯ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.

ಕನ್ನಡದಲ್ಲಿ ‘ಉಲ್ಲಾಸ ಉತ್ಸಾಹ’ ಸಿನಿಮಾದಲ್ಲಿ ನಟಿಸಿದ್ದ ಯಾಮಿ ಗೌತಮ್

ಯಾಮಿ ಗೌತಮ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಪಂಜಾಬಿ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಪ್ರಸಿದ್ದಿ ಪಡೆದಿದ್ದಾರೆ.

ಮದುವೆಯಲ್ಲಿ ಯಾಮಿ ಗೌತಮ್ ತಮ್ಮ ಅಮ್ಮನ ಹಳೇ ಸೀರೆಯನ್ನುಟ್ಟೇ ಸಪ್ತಪದಿ ತುಳಿದಿದ್ದಾರಂತೆ.

ನಟಿ ಯಾಮಿ ಮದುವೆ ಸಂಪ್ರದಾಯದ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಮದುವೆಯಲ್ಲಿ ಪಹಾಡಿ ವಧುವಿನಂತೆ ರೆಡಿಯಾಗಿದ್ದರು.



ಯಾಮಿ ಗೌತಮ್ ಅವರ ಮೆಹಂದಿ ಶಾಸ್ತ್ರದ ಫೋಟೋ..

