ಮೈಸೂರು: 21 ವರ್ಷದ ಗೃಹಿಣಿ ಸೀವೆಎಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಟ.ನರಸೀಪರು ತಾಲೂಕಿನ ಯಾಕನೂರು ಗ್ರಾಮದಲ್ಲಿ ನಡೆದಿದೆ.
ಕಾವ್ಯಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಎರಡು ವರ್ಷದ ಹಿಂದೆ ಚಂದ್ರಶೇಖರ್ ಎಂಬಾತನ ಜೊತೆ ಕಾವ್ಯಾ ಮದುವೆಯಾಗಿತ್ತು. ಅತ್ತೆ ಪುಟ್ಟ ಮಾದಮ್ಮ ತನಗೆ ಕಿರುಕುಳ ನೀಡುತ್ತಿದ್ದಳು ಎಂದು ಕಾವ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೂರು ದಿನಗಳ ಹಿಂದೆ ಕಾವ್ಯಾ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಕುಟುಂಬಸ್ಥರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕರಿಯಾಗದೇ ಕಾವ್ಯಾ ಭಾನುವಾರ ಮೃತಪಟ್ಟಿದ್ದಾರೆ.
ನನ್ನ ಗಂಡ ಚಂದ್ರಶೇಖರ್ ತುಂಬಾನೇ ಒಳ್ಳೆಯವನು, ಆತನಿಗೆ ಏನೂ ಮಾಡಬೇಡಿ. ಆದ್ರೆ ಅತ್ತೆ ಪುಟ್ಟ ಮಾದಮ್ಮ ಮಗನ್ನು ದೂರ ಮಾಡಿದ್ದೀಯಾ ಎಂದು ಕಿರುಕುಳ ನೀಡುತ್ತಿದ್ದಳು. ಇದೇ ವಿಚಾರಕ್ಕೆ ಅತ್ತೆ-ಸೊಸೆ ಮಧ್ಯೆ ಕಲಹ ನಡೆಯುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.
ಅತ್ತೆ ಪುಟ್ಟಮಾದಮ್ಮ ಮತ್ತು ಪತಿ ಚಂದ್ರಶೇಖರ್ ವಿರುದ್ಧ ಕಾವ್ಯಾ ಪೋಷಕರು ವರದಕ್ಷಿಣೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.