ನವದೆಹಲಿ : ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆ ತೀವ್ರ ವಿರೋಧದ ಬಳಿಕ ಎಚ್ಚೇತ್ತುಕೊಂಡಿದೆ.
ಕನ್ನಡದ ಕಡೆಗಣನೆ ಬಗ್ಗೆ ಸೆಕ್ಯೂಲರ್ ಟಿವಿ ವರದಿ ಮಾಡಿದೆ ಬೆನ್ನಲೆ ತನ್ನ ಭಾಷೆ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವಿಟ್ ಮಾಡಿದ್ದು ಕನ್ನಡ ಭಾಷೆಯನ್ನು ಕಲಿಸಲಾಗುವುದು ಎಂದು ಹೇಳಿದ್ದಾರೆ.
ಸನ್ಮಾನ್ಯ ಲೋಕಸಭಾ ಅಧ್ಯಕ್ಷರು 22 ಜೂನರಂದು ವೀಡಿಯೋ ಕಾನ್ಫರೆನ್ಸ ಮುಖಾಂತರ ಸಂಸತ್ ಸದಸ್ಯರಿಗೆ, ಶಾಸಕರಿಗೆ ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳ ಕಲಿಸುವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದೇಶೀಯ ಭಾಷೆಗಳಲ್ಲಿ ಕನ್ನಡಕ್ಕೂ ಸ್ಥಾನ ಸಿಕ್ಕಿದ್ದು ನಮಗೇಲ್ಲಾ ಹೆಮ್ಮೆಯ ವಿಷಯ.@ombirlakota pic.twitter.com/DFDizEud6c
— Pralhad Joshi (@JoshiPralhad) June 21, 2021
ಸಂಸದರು, ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಮತ್ತು ಅಧಿಕಾರಿ ವರ್ಗಗಳಿಗೆ ವಿವಿಧ ಭಾಷೆ ಕಲಿಸಲು ಪ್ರೈಡ್ ಸಂಸ್ಥೆ ಮುಂದಾಗಿತ್ತು, ಅದಕ್ಕಾಗಿ 12 ಭಾಷೆಗಳನ್ನು ಆಯ್ಕೆ ಮಾಡಿಕೊಂಡಿತ್ತು.
ಪಾರ್ಲಿಮೆಂಟರಿ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಸಂಸ್ಥೆ ಆಯ್ಕೆ ಮಾಡಿಕೊಂಡ ಭಾಷೆಗಳು ಪೈಕಿ ಆರು ವಿದೇಶಿ ಭಾಷೆಗಳಾದ ಫ್ರೆಂಚ್, ಜರ್ಮನ್,ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್, ದೇಶಿ ಭಾಷೆಗಳಾದ ಪೈಕಿ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು ಮತ್ತು ತೆಲುಗಿಗೆ ಆದ್ಯತೆ ನೀಡಲಾಗಿತ್ತು.
ಇದನ್ನು ಖಂಡಿಸಿ ಸೆಕ್ಯೂಲರ್ ಟಿವಿ ವರದಿ ಮಾಡಿತ್ತು. ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಬಗ್ಗೆ ಟ್ವಿಟ್ ಮಾಡಿ ಆಕ್ರೊಶ ಹೊರ ಹಾಕಿದರು. ಸೋಶಿಯಲ್ ಮಿಡಿಯಾಗಳಲ್ಲಿ ಟೀಕೆಗೆ ಗುರಿಯಾದ ಬಳಿಕ ಪ್ರೈಡ್ ಸಂಸ್ಥೆ ಈಗ ಕನ್ನಡವನ್ನು ಕಲಿಕಾ ಪಟ್ಟಿಯಲ್ಲಿ ಸೇರಿಸಿಕೊಂಡಿದೆ.