ನವದೆಹಲಿ : ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಇಂದಿನಿಂದ ಹೊಸ ವ್ಯಾಕ್ಸಿನ್ ನೀತಿ ಜಾರಿಯಾಗಲಿದೆ. ದೇಶದ್ಯಾಂತ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಕೇಂದ್ರ ಸರ್ಕಾರದಿಂದಲೇ ಉಚಿತ ವ್ಯಾಕ್ಸಿನ್ ನೀಡಲಾಗುತ್ತೆ.
ವ್ಯಾಕ್ಸಿನ್ ಹೊಸ ನೀತಿ ಜಾರಿ ಬಗ್ಗೆ ಜೂನ್ 8 ರಂದು ಪ್ರಧಾನಿ ಮೋದಿ ಘೋಷಿಸಿದ್ದರು. ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವ್ಯಾಕ್ಸಿನ್ ಪೈಕಿ ಕೇಂದ್ರದಿಂದ 75% ಖರೀದಿ ಮಾಡಿ ರಾಜ್ಯಗಳಿಗೆ ಉಚಿತವಾಗಿ ಹಂಚಿಕೆ ಮಾಡಲಾಗುವುದು ಮತ್ತು 25% ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವುದು ಅದನ್ನು ಸರ್ಕಾರದ ಬೆಲೆಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದರು.
ಮೇ 1 ರಂದು 18-44 ವರ್ಷದವರಿಗೆ ರಾಜ್ಯ ಸರ್ಕಾರಗಳು, 44 ವರ್ಷ ಮೇಲ್ಪಟ್ಟರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ವ್ಯಾಕ್ಸಿನ್ ನೀಡುವುದಾಗಿ ಘೋಷಿಸಲಾಗಿತ್ತು. ಕೇಂದ್ರದ ನಿರ್ಧಾರದ ಬಳಿಕ ಜಾಗತಿಕ ಟೆಂಡರ್ ಕರೆಯಲು ರಾಜ್ಯ ಸರ್ಕಾರಗಳು ಮುಂದಾಗಿದ್ದವು ಆದರೆ ರಾಜ್ಯಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ವ್ಯಾಕ್ಸಿನ್ ಉತ್ಪಾದಕ ಸಂಸ್ಥೆಗಳು ಹಿಂದೇಟು ಹಾಕಿದ್ದವು.
ಇದರಿಂದ ಲಸಿಕೆ ಅಭಿಯಾನಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಇದನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ವ್ಯಾಕ್ಸಿನ್ ಹಂಚಿಕೆ ನೀತಿಯ ವಿರುದ್ಧ ಕೇಂದ್ರ ಸರ್ಕಾರಕ್ಕೆ ಚಾಟೀ ಬೀಸಿತ್ತು. ಈ ಬೆಳವಣಿಗೆ ಬಳಿಕ ಸಂಪೂರ್ಣ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರದಿಂದ ನಿರ್ಧಾರ ಮಾಡಿದೆ.