ಅಲ್ಲಾಹ ಹೇಳೋದರಿಂದ ಯೋಗ ಶಕ್ತಿಯೂ ಕಡಿಮೆ ಆಗಲಾರದು
ನವದೆಹಲಿ: ಇಂದು ಅಂತರಾಷ್ಟ್ರೀಯ ಯೋಗ ದಿನ. ಇಡೀ ವಿಶ್ವ ಯೋಗ ದಿನವನ್ನು ಆಚರಿಸುತ್ತಿದೆ. ಇಂದು ಬೆಳಗ್ಗೆ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ.
ಅಭಿಷೇಕ್ ಸಿಂಘ್ವಿ ಟ್ವೀಟ್:
ಓಂ ಉಚ್ಛಾರಣೆಯಿಂದಲೇ ಯೋಗ ಹೆಚ್ಚು ಶಕ್ತಿಶಾಲಿ ಆಗಲಾರದು ಮತ್ತು ಅಲ್ಲಾಹ ಹೇಳುವದರಿಂದ ಯೋಗದ ಶಕ್ತಿ ಕಡಿಮೆ ಆಗಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಯೋಗ ಗುರು ಬಾಬಾ ರಾಮದೇವ್, ಅಲ್ಲಾಹ, ಭಗವಾನ್, ದೇವರು ಎಲ್ಲವೂ ಒಂದೇ. ಆದ್ದರಿಂದ ಓಂ ಉಚ್ಛಾರಣೆ ಮಾಡುವಲ್ಲಿ ಸಮಸ್ಯೆ ಏನಿದೆ? ಆದ್ರೆ ನಾವು ಬೇರೆಯವರ ದೇವರು ಹೆಸರು ಹೇಳಲು ಹಿಂದೇಟು ಹಾಕುತ್ತಿಲ್ಲ. ಇವರೆಲ್ಲರೂ ಯೋಗ ಮಾಡಬೇಕಿದೆ. ನಂತರ ಆ ದೇವರೇ ಪ್ರತಿಯೊಬ್ಬರನ್ನು ನೋಡಿಕೊಳ್ಳಲಿದ್ದಾನೆ ಎಂದು ಹೇಳಿದ್ದಾರೆ.
ॐ के उच्चारण से ना तो योग ज्यादा शक्तिशाली हो जाएगा और ना अल्लाह कहने से योग की शक्ति कम होगी | #YogaDay2021 #InternationalDayOfYoga
— Abhishek Singhvi (@DrAMSinghvi) June 21, 2021
ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಘೋಷಿಸಿದೆ. ಯೋಗವು ಭಾರತೀಯ ಮೂಲದ, 6,000 ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದೆಹಲಿಯ ರಾಜಪಥ್‍ನಲ್ಲಿ ನೆಡೆಸಲು ಭಾರತ ಸರಕಾರ ಕಾರ್ಯಕ್ರಮ ರೂಪಿಸಿತ್ತು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇಂದಿನಿಂದ ಹೊಸ ವ್ಯಾಕ್ಸಿನ್ ನೀತಿ ಜಾರಿಯಾಗಲಿದೆ. ದೇಶದ್ಯಾಂತ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಕೇಂದ್ರ ಸರ್ಕಾರದಿಂದಲೇ ಉಚಿತ ವ್ಯಾಕ್ಸಿನ್ ನೀಡಲಾಗುತ್ತೆ. ವ್ಯಾಕ್ಸಿನ್ ಹೊಸ ನೀತಿ ಜಾರಿ ಬಗ್ಗೆ ಜೂನ್ 8 ರಂದು ಪ್ರಧಾನಿ ಮೋದಿ ಘೋಷಿಸಿದ್ದರು. ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವ್ಯಾಕ್ಸಿನ್ ಪೈಕಿ ಕೇಂದ್ರದಿಂದ 75% ಖರೀದಿ ಮಾಡಿ ರಾಜ್ಯಗಳಿಗೆ ಉಚಿತವಾಗಿ ಹಂಚಿಕೆ ಮಾಡಲಾಗುವುದು ಮತ್ತು 25% ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವುದು ಅದನ್ನು ಸರ್ಕಾರದ ಬೆಲೆಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದರು.
ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಯೋಗದ ಪಾತ್ರ ಮಹತ್ವವಾದದು. ಯೋಗಾಭ್ಯಾಸದಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಲಗೊಳ್ಳುತ್ತದೆ. ವ್ಯಕ್ತಿತ್ವ ವಿಕಸನ, ಏಕಾಗ್ರತೆಯ ಜೊತೆಗೆ ಸಮಾಜ ನಿರ್ಮಾಣದಲ್ಲಿಯೂ ಯೋಗ ಸಹಕಾರಿಯಾಗಿದೆ. ಯೋಗ, ವ್ಯಾಯಾಮಗಳು ನಮ್ಮ ಜೀವನಕ್ರಮವಾಗಿರಲಿ.#YogaDay2021#YogaForAll pic.twitter.com/D0ifXaxOUS
— B.S. Yediyurappa (@BSYBJP) June 21, 2021
ಮೇ 1 ರಂದು 18-44 ವರ್ಷದವರಿಗೆ ರಾಜ್ಯ ಸರ್ಕಾರಗಳು, 44 ವರ್ಷ ಮೇಲ್ಪಟ್ಟರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ವ್ಯಾಕ್ಸಿನ್ ನೀಡುವುದಾಗಿ ಘೋಷಿಸಲಾಗಿತ್ತು. ಕೇಂದ್ರದ ನಿರ್ಧಾರದ ಬಳಿಕ ಜಾಗತಿಕ ಟೆಂಡರ್ ಕರೆಯಲು ರಾಜ್ಯ ಸರ್ಕಾರಗಳು ಮುಂದಾಗಿದ್ದವು ಆದರೆ ರಾಜ್ಯಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ವ್ಯಾಕ್ಸಿನ್ ಉತ್ಪಾದಕ ಸಂಸ್ಥೆಗಳು ಹಿಂದೇಟು ಹಾಕಿದ್ದವು. ಇದರಿಂದ ಲಸಿಕೆ ಅಭಿಯಾನಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಇದನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ವ್ಯಾಕ್ಸಿನ್ ಹಂಚಿಕೆ ನೀತಿಯ ವಿರುದ್ಧ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈ ಬೆಳವಣಿಗೆ ಬಳಿಕ ಸಂಪೂರ್ಣ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರದಿಂದ ನಿರ್ಧಾರ ಮಾಡಿದೆ.